Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಹಳಷ್ಟು ಜನರು ಮರಣಾನಂತರ ಕಣ್ಣುಗಳನ್ನು ದಾನ ಮಾಡುತ್ತಿಲ್ಲ : ಡಾ. ಪ್ರಭುದೇವ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಆ.27) : ಮರಣದ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ಇತರೆ ಇಬ್ಬರಿಗೆ ಉಪಯೋಗವಾಗುತ್ತದೆ, ಇದರ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ನೇತ್ರ ತಜ್ಞರಾದ ಡಾ. ಪ್ರಭುದೇವ್ ತಿಳಿಸಿದರು.

ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಶನಿವಾರ ರಾತ್ರಿ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್‍ವತಿಯಿಂದ ಹಮ್ಮಿಕೊಂಡಿದ್ದ ಆ. 25 ರಿಂದ ಸೆ. 08ರವರೆಗೆ 38ನೇ ರಾಷ್ಟ್ರೀಯ ನೇತ್ರದಾನ ಪ್ರಾಕ್ಷಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಕ್ಷಿಕಕ್ಕೆ ಸಂಬಂಧಪಟ್ಟಂತೆ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮಾನವನಿಗೆ ಕಣ್ಣು ಅತಿ ಮುಖ್ಯವಾದ ಅಂಗವಾಗಿದೆ. ಇದನ್ನು ಕಾಪಾಡಿಕೊಳ್ಳುವುದು ಅತಿ ಅನಿವಾರ್ಯವಾಗಿದೆ. ಕೆಲವೊಮ್ಮೆ ಕಣ್ಣಿನ ತೊಂದರೆ ಬರುತ್ತದೆ ಅದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆಯವುದರ ಮೂಲಕ ನಿವಾರಿಸಿಕೊಳ್ಳಬೇಕಿದೆ ಇಲ್ಲವಾದರೆ ಕಣ್ಣನ್ನು ಕಳೆದುಕೊಳ್ಳುಬಹುದಾಗಿದೆ ಎಂದ ಅವರು, ಕೆಲವೊಮ್ಮೆ ಹೂರಗಿನ ವಾತಾವರಣದಿಂದ ಮತ್ತೇ ಕೆಲವೊಮ್ಮೆ ಅನುವಂಶೀಯತೆ ಇಂದ ಸಹಾ ಕಣ್ಣುನ ತೊಂದರೆ ಬರಬಹುದಾಗಿದೆ.
ನಮ್ಮ ಮರಣದ ನಂತರ ನಮ್ಮ ಕಣ್ಣುಗಳನ್ನು ಹಾಳು ಮಾಡದೇ ಅದನ್ನು ಬೇರೆಯವರಿಗೆ ದಾನ ಮಾಡುವುದರ ಮೂಲಕ ಇತರ ಆಂಧರ ಬಾಳಿಗೆ ಬೆಳಕಾಗಬೇಕಿದೆ ಎಂದು ತಿಳಿಸಿದರು.

ಇಂದಿನ ದಿನಮಾನದಲ್ಲಿ ಕಣ್ಣು ಇಲ್ಲದೆ ಲಕ್ಷಾಂತರ ಜನತೆ ನೋವಿನಿಂದ ಬಳುತ್ತಿದ್ದಾರೆ ಇವರಿಗೆ ಮಾನವನ ಕಣ್ಣು ಮಾತ್ರ ಹೊಂದಿಕೆಯಾಗುತ್ತವೆ ಇತರೆ ಬೇರೆ ಯಾರ ಕಣ್ಣು ಸಹಾ ಹೊಂದಿಕೆಯಾಗುವುದಿಲ್ಲ, ಈ ಹಿನ್ನಲೆಯಲ್ಲಿ ಮಾನವ ತನ್ನ ಮರಣದ ನಂತರ ಕಣ್ಣುಗಳನ್ನು ಸುಡದೆ, ಹೂಳದೆ ದಾನವನ್ನು ಮಾಡಬೇಕಿದೆ, ಆದರೆ ಬಹಳಷ್ಟು ಜನತೆ ತಮ್ಮ ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಮುಂದೆ ಬರುತ್ತಿಲ್ಲ ಇದಕ್ಕೆ ಮೂಢನಂಬಿಕೆ ಕಾರಣವಾಗಿರಬಹುದೆಂದು ಫ್ರಭುದೇವ ವಿಷಾದಿಸಿದರು.

ಕಣ್ಣುಗಳ ದಾನದ ಕಾರ್ಯವನ್ನು ಒಬ್ಬರಿಂದ ಮಾಡಲು ಸಾಧವ್ಯವಿಲ್ಲ ಇದರ ಬಗ್ಗೆ ಜನ ಜಾಗೃತಿಯನ್ನು ಮೂಡಿಸಲು ಇಂತಹ ಸಂಘ ಸಂಸ್ಥೆಗಳು ನೆರವು ಅಗತ್ಯವಾಗಿದೆ ಈ ಹಿನ್ನಲೆಯಲ್ಲಿ ಬಸವೇಶ್ವರ ಪುನರ್ ಐ ಜ್ಯೋತಿ ಬ್ಯಾಂಕ್ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ ಮರಣವನ್ನು ಹೊಂದಿದವರ ಕಣ್ಣುಗಳನ್ನು ದಾನವಾಗಿ ಪಡೆಯುವುದರ ಮೂಲಕ ಅದನ್ನು ಬೇರೆಯವರಿಗೆ ಜೋಡಿಸುವ ಸಲುವಾಗಿ ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಒಂದು ಕಣ್ಣು ದಾನ ಮಾಡಿದರೆ ಅದನ್ನು ಮೂರು ಜನರಿಗೆ ಅಳವಡಿಕೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಬಸವೇಶ್ವರ ಪುನರ್ ಐ ಜ್ಯೋತಿ ಬ್ಯಾಂಕ್‍ನ ಅಧ್ಯಕ್ಷರಾದ ಶಿವರಾಂ ಮಾತನಾಡಿ, ಕಳೆದ 16 ವರ್ಷದಿಂದ ಈ ಬ್ಯಾಂಕ್ ಕೆಲಸವನ್ನು ಮಾಡುತ್ತಿದೆ. ಇದುವರೆವಿಗೂ 1650 ಕಣ್ಣುಗಳನ್ನು ಸಂಗ್ರಹ ಮಾಡಿ ಬೇರೆಯವರಿಗೆ ದಾನವಾಗಿ ಕೂಡಿಸಿದೆ. ಒಂದು ವರ್ಷದಿಂದ ಹಿಡಿದು ಕೂನೆಯ ಸಾಯುವವರೆಗೂ ತಮ್ಮ ಕಣ್ಣುಗಳನ್ನು ತಮ್ಮ ಮರಣದ ನಂತರ ದಾನ ಮಾಡಬಹುದಾಗಿದೆ.

ಭಾರತದಲ್ಲಿ 1.20 ಕೋಟಿ ಅಂಧರಿದ್ದಾರೆ ಇವರಿಗೆ ಕಣ್ಣುಗಳನ್ನು ಜೋಡಿಸಬೇಕಿದೆ. ಆದರೆ ನಮಗೆ ಸಿಗುವು ಕಣ್ಣುಗಳು ಸಂಖ್ಯೆ ಮಾತ್ರ ಕಡಿಮೆ ಇದೆ ಕೇವಲ 25000 ಕಣ್ಣುಗಳು ಮಾತ್ರ ದೂರಕುತ್ತಿವೆ, ಕಣ್ಣುಗಳಿಗೆ 68 ಲಕ್ಷ ಜನತೆ ಕಾಯುತ್ತಿದ್ದಾರೆ ನಮ್ಮಲ್ಲಿ ಬೇಡಿಕೆ ಹೆಚ್ಚಾಗಿದೆ ಆದರೆ ಪೂರೈಕೆ ಮಾತ್ರ ಕಡಿಮೆ ಇದೆ ಎಂದರು.

ಮಾಜಿ ಅಧ್ಯಕ್ಷರಾದ ಗಾಯತ್ರಿ ಮಾತನಾಡಿ ಆ. 25 ರಿಂದ ಪ್ರಾರಂಭವಾಗಿ ಸೆ. 08ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರು ಸಹಾ ಸೈನಿಕರ ರೀತಿಯಲ್ಲಿ ಕೆಲಸ ಮಾಡಬೇಕಿದೆ ಜನತೆಗೆ ಕಣ್ಣುಗಳ ಮಹತ್ವವನ್ನು ತಿಳಿಸಬೇಕಿದೆ. ಇದು ಒಬ್ಬರಿಂದ ಆಗುವ ಕೆಲಸವಲ್ಲ ಎಲ್ಲರು ಸೇರಿ ಮಾಡುವ ಕೆಲಸವಾಗಿದೆ. ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ. ಕಣ್ಣುಗಳನ್ನು ತೆಗೆಯಲು ಯಾವಾಗ ಬೇಕಾದರು ದೂರವಾಣಿ ಬರಬಹುದು ಆಗ ನಮಗೆ ಕಿರಿಕಿರಿ ಎನ್ನಿಸುತ್ತದೆ ಆದರೆ ಕೆಲಸ ಮಾಡಿದಾಗ ಧನ್ಯತಾ ಭಾವನೆ ಮೂಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಕನಕರಾಜು, ಚಿತ್ರದುರ್ಗ ರೋಟರಿ ಪೋಟೋ ಕ್ಲಬ್ ಅಧ್ಯಕ್ಷರಾದ ಗೀರೀಶ್ ಹಾಗೂ ಚಿನ್ಮೂಲಾದ್ರಿ ರೋಟರಿ ಕ್ಲಬ್‍ನ ಅಧ್ಯಕ್ಷರಾದ ಶಂಕ್ರಪ್ಪ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

ಹೊಸದುರ್ಗ | ಕೃಷಿ‌ ಮಾರುಕಟ್ಟೆಯಲ್ಲಿ ಡಿ. ಗ್ರೂಪ್ ನೌಕರ ಆತ್ಮಹತ್ಯೆ..!

ಸುದ್ದಿಒನ್, ಹೊಸದುರ್ಗ, ಮೇ. 20 : ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ.

error: Content is protected !!