ಬಾಗಲಕೋಟೆ: 2023ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಪ್ರಚಾರ ಕಾರ್ಯದ ನಡುವೆ ಈ ಜಾತಿ ರಾಜಕಾರಣ ಜೋರಾಗಿದೆ. ಕುಮಾರಸ್ವಾಮಿ ಅವರು ಬ್ರಾಹ್ಮಣ ಸಮುದಾಯದ ಸಿಎಂ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಹಿಂದುತ್ವದ ಬಗ್ಗೆ ಮಾತನಾಡಿದ್ದಾರೆ. ಈ ಎರಡು ವಿಚಾರ ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮಂತ್ರಾಲಯ ಮಠದ ಸ್ವಾಮೀಜಿ ಸುಬುದೇಂದ್ರ ಸ್ವಾಮೀಜಿ ಮಾತನಾಡಿದ್ದು, ನಾನು ಹಿಂದೂ ವಿರೋಧವಲ್ಲ, ಹಿಂದುತ್ವದ ವಿರೋಧಿ ಎಂದು ಸಿದ್ದರಾಮಯ್ಯ ಅವರು ಹೇಳಿದ ಮಾತಿಗೆ ಕಿಡಿಕಾರಿದ್ದಾರೆ. ಯಾರು ಹಿಂದುಗಳು ಆಗಿದ್ದಾರೆ ಅವರು ಹಿಂದುತ್ವ ಗೌರವಿಸಬೇಕು. ಹಿಂದು ಗೌರವಿಸುತ್ತೀನಿ, ಹಿಂದುತ್ವವನ್ನು ಒಪ್ಪಲ್ಲ ಎಂಬ ಸಮಂಜಸವನ್ನು ಒಪ್ಪುವುದಿಲ್ಲ ಎಂದು ಮಂತ್ರಾಲಯ ಮಠದ ಸುಬಿದೇಂದ್ರ ಶ್ರೀಗಳು ಹೇಳಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆಗೆ, ಧರ್ಮದಲ್ಲಿ ರಾಜಕೀಯ ಬರಬಾರದು. ಹಿಂದುಳಿದವರು ಸಿಎಂ ಆಗಬೇಕು ಎಂದು ಸಂವಿಧಾನದಲ್ಲಿಯೇ ಇದೆ. ಬ್ರಾಹ್ಮಣರು ಸಿಎಂ ಆದರೆ ತಪ್ಪೇನು ಇಲ್ಲ. ಮುಖ್ಯವಾಗಿ ಈ ಜಾತಿ ರಾಜಕಾರಣ ಎಂಬುದು ತೊಲಗಬೇಕು. ಸಂವಿಧಾನದಲ್ಲಿ ಇಂಥ ಜಾತಿಯವರೇ ಅಧಿಕಾರ ನಡೆಸಬೇಕು ಎಂಬುದಿಲ್ಲ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲಾ ಜನಾಂಗದವರಿಗೂ ಸಮಾನವಾಗಿ ಕಾಣುವಂತೆ ತಿಳಿಸಿದ್ದಾರೆ.