ಮಂಜುನಾಥ್ ಕೊಲೆ ಪ್ರಕರಣ : ಆರೋಪಿಗಳನ್ನು ಬಂಧಿಸಿದ ಪೊಲೀಸರು

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 30: ಇತ್ತೀಚೆಗೆ ಕೋಣನೂರಿನಲ್ಲಿ ನಡೆದ ಮಂಜುನಾಥನ ಕೊಲೆ ಎಲ್ಲೆಡೆ ಸುದ್ದಿಯಾಗಿತ್ತು. 19 ವರ್ಷದ ರಕ್ಷಿತಾ ಎಂಬ ಯುವತಿಯನ್ನ 43 ವರ್ಷ ಮಂಜುನಾಥ್ ಮದುವೆಯಾಗಿದ್ದನೆಂಬ ಕಾರಣಕ್ಕೆ ಯುವತಿಯ ಮನೆಯವರು ಆತನನ್ನು ಕೊಲೆ ಮಾಡಿದ್ದರು. ಮಂಜುನಾಥ್ ಮೊದಲ ಹೆಂಡತಿಯ ಸಾವಿನ ಕಾರಣದಿಂದಾನೇ ಜೈಲಿನಲ್ಲಿದ್ದು ಬಂದವನು. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.

 

ದಿವ್ಯಾ, ಪ್ರಸನ್ನಕುಮಾರ, ಕಾವ್ಯ, ಶಂಕ್ರಮ್ಮ ಬಸವರಾಜಪ್ಪ, ಹರೀಶ, ಜಗದೀಶ್ ಬಂಧಿತ ಆರೋಪಿಗಳು. ಈ ವೇಳೆ ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡರು. ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ.ದಿನಕರ್.ಪಿ.ಕೆ. ಪೊಲೀಸ್ ಉಪಾಧೀಕ್ಷಕರು, ಚಿತ್ರದುರ್ಗ ಉಪವಿಭಾಗ ರವರ ನಿರ್ದೇಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಸಾದ್, ಪಿ. ರವರ ನೇತೃತ್ವದಲ್ಲಿ ಪಿ.ಎಸ್.ಐ. ರವರುಗಳಾದ ಸುರೇಶ ಮತ್ತು ಬಸವರಾಜ ಮತ್ತು ಸಿಬ್ಬಂದಿಯವರಾದ ಯಶ್ಯಾಖಾನ್, ಯತೀಶ್, ಎಂಜೆ. ಶಿವಕುಮಾರ್ ಬಿ.ಕೆ. ಜ್ಯೋತಿ ಎನ್.ಬಿ. ಶ್ರೀಮತಿ ಮುಬೀನಾ, ಸಿದ್ದೇಶ.ಆರ್. ಶಿವರಾಜ್, ಕೆ.ಜಿ. ಹಳೆಮನೆ ಮಂಜಪ್ಪ, ತಿಪ್ಪೇಶ, ಹೆಚ್.ಎಂ. ಅಣ್ಣಪ್ಪ, ಬಿ.ಎನ್. ಶಿವಕುಮಾರ. ಜೆ. ಕಲ್ಲೇಶ.ಎಸ್. ಶ್ರೀನಿವಾಸ ಟಿ.ಆರ್. ಶ್ರೀಮತಿ ಸುಜಾತ, ಹೆನ್ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು.

ರಕ್ಷಿತಾಳನ್ನು ಮಂಜುನಾಥ್ ಪ್ರೀತಿಸಿ ಮದುವೆಯಾಗಿದ್ದ ಕಾರಣ ಯುವತಿಯ ಮನೆಯವರು ಹಲ್ಲೆ ನಡೆಸುತ್ತಾರೆ. ಮಂಜುನಾಥ್ ಹಲ್ಲೆಯ ಬಳಿಕ ಮಂಜುನಾಥ್ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *