ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅರೆಸ್ಟ್.. ಕರ್ನಾಟಕದಲ್ಲೂ ಎಎಪಿಗೆ ಶಾಕ್..!

ಆಮ್ ಆದ್ಮಿ ಪಕ್ಷಕ್ಕೆ ಪದೇ ಪದೇ ಸಂಕಷ್ಟ ಎದುರಾಗುತ್ತಿದೆ. ಆಮ್ ಆದ್ಮಿ ಪಕ್ಷದ ಆರೋಗ್ಯ ಸಚಿವ ಈಗಾಗಲೇ ಜೈಲಿನಲ್ಲಿ ಕೂತಿದ್ದಾರೆ. ಮೊನ್ನೆಯಷ್ಟೇ DCM ಮನೀಶ್ ಸಿಸೋಡಿಯಾ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಎಎಪಿಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಆಮ್ ಆದ್ಮಿ ಪಕ್ಷ ಸೇರಿದ್ದ ಭಾಸ್ಕರ್ ರಾವ್ ಇದೀಗ ಪಕ್ಷ ಬಿಡುತ್ತಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕರ್ನಾಟಕಕ್ಕೆ ಆಗಮಿಸುವ ಮುನ್ನವೇ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಮಾರ್ಚ್ 4ರಂದು ಕೇಜ್ರಿವಾಲ್ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದರು. ಇದೀಗ ಭಾಸ್ಕರ್ ರಾವ್ ಅವರು ಇದ್ದಕ್ಕಿದ್ದ ಹಾಗೇ ಎಎಪಿ ತೊರೆದಿದ್ದಾರೆ. ಜೊತೆಗೆ ಬಿಜೆಪಿ ಸೇರುವ ಸೂಚನೆಯನ್ನು ನೀಡಿದ್ದಾರೆ.

ಸಚಿವ ಆರ್ ಅಶೋಕ್ ಜೊತೆಗೆ ಭಾಸ್ಕರ್ ರಾವ್ ಅವರು ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಇನ್ನು ನಾಳೆ ಭಾಸ್ಕರ್ ರಾವ್ ಬಿಜೆಪಿ ಪಕ್ಷ ಸೇರುತ್ತಿದ್ದಾರೆ. ಮಲ್ಲೇಶ್ವರಂನಲ್ಲಿರುವ ಮುಖ್ಯ ಕಚೇರಿಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *