ಮಣಿಪುರ ಹಿಂಸಾಚಾರ : ಕಾನೂನು ಕ್ರಮಕ್ಕೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಕ್ರೈಸ್ತ ಸಮುದಾಯ ಮೌನ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, (ಜು.31) :  ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಚಿತ್ರದುರ್ಗ ತಾಲ್ಲೂಕು ಕ್ರೈಸ್ತ ಸಮುದಾಯದ ಒಕ್ಕೂಟದವರು ಸೋಮವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಣಿಪುರ ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುವ ಕ್ರೈಸ್ತ ಸಮುದಾಯದ ಕುಕ್ಕಿಗಳಿಗು ಮತ್ತು ಮೇತೆಯ ಸಮುದಾಯಗಳ ಮಧ್ಯೆ ಸುಮಾರು 80 ದಿನಗಳಿಂದಲೂ ಜನಾಂಗೀಯ ಘರ್ಷಣೆ ಉಂಟಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ದರು ಬಲಿಯಾಗಿದ್ದಾರೆ. ಅಲ್ಲದೆ ಕುಕ್ಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ನಡು ಬೀದಿಯಲ್ಲಿ ಮೆರವಣಿಗೆ ಮಾಡಿ, ನಾನಾ ರೀತಿಯ ಚಿತ್ರಹಿಂಸೆ ನೀಡಿ, ಸಾಮೂಹಿ ಅತ್ಯಚಾರ ನಡೆಸಿ, ಕೊಲೆ ಮಾಡಿರುವ ಘಟನೆ ಈಡೀ ದೇಶವೆ ತಲೆ ತಗ್ಗಿಸುವಂತಹ ಅಮಾನಿಷ ಕೃತ್ಯವಾಗಿದೆ. ಈ ಘಟನೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ದೌರ್ಜನ್ಯಕೋರರು ಭಾಗುಯಾಗಿದ್ದು ಅವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕ್ರೈಸ್ತ ಸಮುದಾಯದ ಮೇಲೆ ಮೀಸಲಾತಿ ಹಾಗೂ ಇನ್ನಿತರ ಕಾರಣಗಳಿಂದ ಉಂಟಾದ ಭಿನ್ನಾಭಿಪ್ರಾಯವು ತೀವ್ರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡು ಇಡೀ ರಾಜ್ಯದ ಶಾಂತಿ ಸುವ್ಯವಸ್ಥೆ ನಾಶವಾಗಿದೆ. ಸುಮಾರು 140 ಕ್ಕಿಂತಲೂ ಹೆಚ್ಚು ಜನರು ಅಮೂಲ್ಯ ಜನರ ಪ್ರಾಣಹಾನಿಯಾಗಿದೆ. 1 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸುಮಾರು 500 ಕ್ಕಿಂತಲೂ ಹೆಚ್ಚು ಚರ್ಚ್ ಕಟ್ಟಡಗಳು ಧ್ವಂಸಗೊಂಡಿವೆ. ಅಲ್ಲದೆ ಸಾಕಷ್ಟು ಜನರು ಆಸ್ತಿ ಪಾಸ್ತಿ, ಹೊಲ ಮನೆಗಳು ಕಳೆದುಕೊಂಡು ನಿರಾಶ್ರಿತರಾಗಿ, ಅಡವಿ ಸೇರಿಕೊಂಡಿದ್ದಾರೆ. ಸರ್ಕಾರ ಅಂತಹ ಜನರಿಗೆ  ಧೈರ್ಯ ತುಂಬುವ ಕೆಲಸ ಮಾಡಬೇಕು.

ಗಲಭೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡಿ, ಸರ್ಕಾರಿ ಉದ್ಯೋಗ ನೀಡಬೇಕು. ಸಂತ್ರಸ್ತರ ಜೀವನೋಪಾಯಕ್ಕೆ ಹಾಗೂ ಪುನರ್ವಸತಿಗೆ ವಿಶೇಷ ಪ್ಯಾಕೇಜ್ ನ್ನು ಶೀಘ್ರವಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಫಾದರ್ ಅಲೆಕ್ಸಾಂಡರ್, ಫಾದರ್ ಡೀಸೋಜಾ, ಫಾದರ್ ಸರ್ಜಿ, ಫಾದರ್ ಫಲಾಪ್ರವೀಣ್, ಸಿಸ್ಟರ್ ಮೇರಿ, ಹೆಲಿಜಬೆತ್, ಫಿಲಿಪ್ ರಾಜಾ, ಮೇರಿ ಜಾಯಿನಿತಾ, ಏಸು ಧಾಸ್, ಶ್ವೇತ, ಪೌಲಿನ್ ಜೋಸ್ಮಿನ್ ಮೇರಿ ಜೀಸ್ಮಿನ್, ಅನಷಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *