ಶಾಲೆಯಲ್ಲಿ ಪ್ರವಾಸ ಹೊರಟರೆ ಮಕ್ಕಳ ಮನಸ್ಸು ಫುಲ್ ಖುಷಿಯಾಗಿ ಬಿಡುತ್ತದೆ. ಎಲ್ಲರು ಒಟ್ಟಿಗೆ ಹೋಗುವುದು, ಎಂಜಾಯ್ ಮಾಡುವುದು ಒಂದು ರಿಲ್ಯಾಕ್ಷೇಷನ್ ರೀತಿಯೇ ಸರಿ. ಹೀಗೆ ಶಾಲೆಯಲ್ಲಿ ಹಾಕಿದ್ದ ಟ್ರಿಪ್ ಗೆ ಎಲ್ಲಾ ಮಕ್ಕಳು ಖುಷಿಯಾಗಿ ಹೊರಟಿದ್ದರು. ಆದರೆ ಸೇರಿದ್ದು ಪ್ರವಾಸಿ ಸ್ಥಳ ಅಲ್ಲ, ಬದಲಿಗೆ ಸ್ಮಶಾನವನ್ನು. ಮಕ್ಕಳನ್ನು ಸಂತಸದಿಂದ ಕಳುಹಿಸಿಕೊಟ್ಟ ಪೋಷಕರು ಇದನ್ನು ಸಹಿಸಿಕೊಳ್ಳುವುದಾದರೂ ಹೇಗೆ..?.

ಈ ದುರ್ಘಟನೆ ನಡೆದಿರುವುದು ಮಣಿಪುರದ ನೋನಿ ಜಿಲ್ಲೆಯ ಬಿಸ್ನಾಪುರ್ – ಖೌಪುಮ್ ಸಂಚರಿಸುವ ರಸ್ತೆಯ ಮಾರ್ಗದಲ್ಲಿ. ಯಾರಿಪೋಕ್ ನ ಥಂಬಲುನ ಪ್ರದೇಶಕ್ಕೆ ಸೇರಿದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವಾಸಕ್ಕೆಂದು ಮಕ್ಕಳನ್ನು ಕರೆದು ಹೊರಟಿತ್ತು. ಶಾಲಾ ಬಸ್ ನಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಪ್ರಯಾಣ ಮಾಡುತ್ತಿದ್ದರು.

ಆದ್ರೆ ಮಣಿಪುರದ ಬಳಿ ಶಾಲಾ ಬಸ್ ನಿಯಂತ್ರಣ ತಪ್ಪಿ ಬಸ್ ಪ್ಲಟಿಯಾಗಿದೆ. ಪರಿಣಾಮ ಬಸ್ ನಲ್ಲಿದ್ದ 7 ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಇನ್ನುಳಿದವರಿಗೆ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪುರ ಸರ್ಕಾರದಿಂದ ಪರಿಹಾರ ಘೋಷಣೆಯಾಗಿದ್ದು, ಮೃತ ಮಕ್ಕಳ ಕುಟುಂಬಕ್ಕೆ 5 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ಘೋಷಣೆ ಮಾಡಲಾಗಿದೆ.

