ಮೈಸೂರು: ಮಂಗಳೂರಿನಲ್ಲಿ ಮಸೀದಿ ವಿಚಾರಕ್ಕೆ ತಾಂಬೂಲ ಪೂಜೆ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಅಷ್ಟಮಂಗಲಕ್ಕೂ ಅದಕ್ಕೂ ಸಂಬಂಧವಿಲ್ಲ. ಅಲ್ಲಿ ಅಷ್ಟಮಂಗಲ ಪ್ರಶ್ನೆಗಿಂತ ಹೆಚ್ಚಾಗಿ ಇಲ್ಲಿ ಕೇಶವಕೃಪಾನೋ ಏನೋ ಇದೆಯಲ್ಲ ಸಂದೇಶಗಳು ಬರುತ್ತವೆ. ಈ ದೇಶಕ್ಕೆ ಮುಂದೆ ಭವಿಷ್ಯ ಇಲ್ಲ ಎಂಬುದನ್ನು ಈ ರೀತಿಯ ವಾತಾವರಣಗಳನ್ನು ನಿರ್ಮಾಣ ಮಾಡಲು ಹೊತಟಿದ್ದಾರೆ. ಬಡವರ ಸಮಸ್ಯೆಗಳನ್ನು ಕೇಳುವವರಿಲ್ಲ. ದೇಶದ ಅಭಿವೃದ್ಧಿ, ಸಾಮರಸ್ಯವನ್ನು ಹಾಳು ಮಾಡುವ ಸ್ಥಿತಿಗೆ ಬಂದಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಕಾವೇರಿ ಬಗ್ಗೆ ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ. ಇವತ್ತೇನಾದರೂ ಕೆ ಆರ್ ಪೇಟೆ, ನಾಗಮಂಗಲ, ಪಾಂಡವಪುರ ಭಾಗಗಳಿಗೆ ನೀರು ತಂದುಕೊಟ್ಟ ಕಾರ್ಯ ನಡೆದಿದ್ದರೆ ಅದು ದೇವೇಗೌಡರ ಫಲಶೃತಿ. ಮಂಡ್ಯಗೆ ಅಭಿವೃದ್ಧಿ ಕಾರ್ಯ ಶುರು ಮಾಡುವುದರೊಳಗೆ ಸರ್ಕಾರವನ್ನೆ ತೆಗೆದರಲ್ಲ. ಸರ್ಕಾರ ಇದ್ದಿದ್ದರೆ ಅಭಿವೃದ್ಧಿ ಏನು ಎಂಬುದನ್ನು ತೋರಿಸುತ್ತಿದೆ. ನಾನು ಎಷ್ಟು ವರ್ಷ ಅಧಿಕಾರದಲ್ಲಿದ್ದೆ. ಮೆಡಿಕಲ್ ಕಾಲೇಜು 2006-7 ಹಣ ಕೊಟ್ಟಿದ್ದು ನಾವೂ ಎಂದು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ.
ಇನ್ನು ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ವಿಜಯೇಂದ್ರಗೆ ಟಿಕೆಟ್ ಮಿಸ್ಸಾಗಿದ್ದರ ಬಗ್ಗೆ ಮತನಾಡಿ, ಅವರಲ್ಲಿರುವ ಆಂತರಿಕ ಭಿನ್ನಾಭಿಪ್ರಾಯದಿಂದ ರಾಜ್ಯದ ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಇನ್ನು ಅವರ ಪಕ್ಷದಲ್ಲಿಯೇ ಗುಂಪುಗಾರಿಕೆ ಇದೆ. ಯಾವುದೇ ತತ್ವದ ಕಥೆ ಹೇಳಿ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದು ಬಿಜೆಪಿಗೆ ತಿರುಗುಬಾಣವಾಗಲಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಇಲ್ಲ. ಆದರೆ ಸರ್ಕಾರದ ಮೇಲೆ ಗಂಭೀರ ಪ್ರಭಾವ ಬೀರಬಹುದು ಎಂದಿದ್ದಾರೆ.