ಮಂಗಳೂರು: ನಗರದಲ್ಲಿ ಆಟೋದಲ್ಲಿ ಕುಕ್ಕರ್ ಒಳಗೆ ಬ್ಲಾಸ್ಟ್ ಆದ ಬಾಂಬ್ ಬಗ್ಗೆ ಇದೀಗ FSL ವರದಿ ಹೊರಬಿದ್ದಿದ್ದು, ಭಯನಾಕ ಸತ್ಯವೊಂದು ತಿಳಿದು ಬಂದಿದೆ. ಒಂದು ವೇಳೆ ಈ ಬಾಂಬ್ ಸರಿಯಾದ ಮಾದರಿಯಲ್ಲೇನಾದರೂ ಬ್ಲಾಸ್ಟ್ ಆಗಿದ್ದರೆ, ಅಂದು ದೊಡ್ಡ ಅನಾಹುತವೇ ಆಗಬೇಕಿತ್ತು. ಆಟೋದಲ್ಲಿ ಪ್ರಯಾಣಿಸುತ್ತಿದ್ದವರ ಅದೃಷ್ಟವೂ ಚೆನ್ನಾಗಿತ್ತು ಎನಿಸುತ್ತದೆ.

ಈ ಸಂಬಂಧ ಎಫ್ ಎಸ್ ಎಲ್ ವರದಿ ಬಂದಿದ್ದು, ಶಾರೀಖ್ ಬಳಿ ಕುಕ್ಕರ್ ನಲ್ಲಿದ್ದ ಬಾಂಬ್ ಗೆ ಒಂದು ಬಸ್ ಅನ್ನು ಸ್ಪೋಟಿಸುವ ಶಕ್ತಿ ಇತ್ತಂತೆ. ಆದರೆ ಸರಿಯಾದ ಮಾದರಿಯಲ್ಲಿ ಸ್ಪೋಟಗೊಳ್ಳದ ಕಾರಣ ಕಡಿಮೆ ಪ್ರಮಾಣದಲ್ಲಿ ಅನಾಹುತವಾಗಿದೆ. ಮೂರು ಲೀಟರ್ ಕುಕ್ಕರ್ ತುಂಬಾ ಸ್ಪೋಟಕವನ್ನು ಇಡಲಾಗಿತ್ತು. ಅದಕ್ಕೆ ಡಿಟೋನೇಟರ್ ಕೂಡ ಇತ್ತಂತೆ. ಅದಕ್ಕೆ ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಇಟ್ಟಿದ್ದಾನೆ. ಬ್ಲಾಸ್ಟ್ ಆಗುವಾಗ ಈ ಪ್ಲಸ್ ಅಂಡ್ ಮೈನಸ್ ಸರಿಯಾದ ಮಾದರಿಯಲ್ಲಿ ಕನೆಕ್ಟ್ ಆಗಿಲ್ಲ ಎಂದು ಎಫ್ ಎಸ್ ಎಲ್ ವರದಿಯಲ್ಲಿ ತಿಳಿಸಲಾಗಿದೆ.

ಕುಕ್ಕುರ್ ಒಳಗಿದ್ದ ಸ್ಪೋಟಕ್ಕೆ ಪ್ಲಸ್ ಮತ್ತು ಮೈನಸ್ ಸರಿಯಾಗಿ ವರ್ಕ್ ಆಗಿಲ್ಲ. ಹೀಗಾಗಿ ಡಿಟೋನೇಟರ್ ಗೆ ಪವರ್ ಸಪ್ಲೈ ಆಗದೆ, ಜೆಲ್ ಗೆ ಮಾತ್ರ ಬೆಂಕಿ ತಗುಲಿದೆ. ಇದರಿಂದ ಬ್ಲಾಸ್ಟ್ ಆಗಿದ್ದು, ಸುತ್ತಲೂ ದಟ್ಟ ಹೊಗೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.


