ಮಂಡ್ಯ: ಸುಮಲತಾ ಕೇಂದ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರ್ತಾ ಇದ್ದಾರೆ. ಆದ್ರೆ ಯಾವ ಪಕ್ಷಕ್ಕರ ಸೇರ್ಪಡೆಯಾಗ್ತಾರೆ ಎಂಬ ಚರ್ಚೆಗಳು ದಟ್ಟವಾಗಿತ್ತು. ಬಿಜೆಪಿ ಸೇರುವ ಎಲ್ಲಾ ಲಕ್ಷಣವಿತ್ತು, ಬಳಿಕ ಕಾಂಗ್ರೆಸ್ ಸೇರ್ತಾರೆ ಎನ್ನಲಾಗಿತ್ತು. ಈಗ ಕಡೆಗೂ ಬಿಜೆಪಿಯನ್ನೇ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಆದ್ಋ ಬಿಜೆಪಿ ಸೇರಿದ್ದಾದರೂ ಯಾಕೆ ಎಂಬ ಪ್ರಶ್ನೆ ಸರಣಿ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
ವಿಶ್ವದ ನಾಯಕರಾಗಿ ಭಾರತವನ್ನು ಮುನ್ನೆಡೆಸುತ್ತಿರುವ ಪ್ರಧಾನ ಮಂತ್ರಿಗಳು ಮಂಡ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾರೆ ಎನ್ನುವ ವಿಶ್ವಾಸ ನನ್ನದು.ಎಂದಿನಂತೆ ನಿಮ್ಮ ಆಶೀರ್ವಾದ,ಪ್ರೀತಿ ಸದಾ ನನ್ನ ಜೊತೆಗಿರಲಿ. ರಾಜಕಾರಣ ಬೇಕಾದರೂ ಬಿಡುತ್ತೇನೆ ಸ್ವಾಭಿಮಾನ ಬಿಡಲಾರೆ, ಪ್ರಾಣ ಬೇಕಾದರೂ ಬಿಡುತ್ತೇನೆ ಮಂಡ್ಯವನ್ನು ಬಿಡಲಾರೆ.
ಮಂಡ್ಯ ಕ್ಷೇತ್ರದ ನನ್ನ ಸ್ವಾಭಿಮಾನಿಗಳೇ,
ಮಂಡ್ಯ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ನನ್ನ ಸ್ವಾಭಿಮಾನಿ ಮಂಡ್ಯದ ಜನತೆಯ ನೆಮ್ಮದಿಯ ನಾಳೆಗಳಿಗಾಗಿ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ @narendramodi ಅವರ ನೇತೃತ್ವದ @BJP4India ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿರುವೆ ಎಂದಿದ್ದಾರೆ.