ಆಧುನಿಕ ಭಗೀರಥ ಮಂಡ್ಯದ ಕಾಮೇಗೌಡ ಇನ್ನಿಲ್ಲ..!

1 Min Read

 

ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಕಾಮೇಗೌಡರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸದೊಡ್ಡಿಯವರಾದ ಕಾಮೇಗೌಡ ಅವರು ಆಧುನಿಕ ಭಗೀರಥ ಎಂದೇ ಖ್ಯಾತರಾಗಿದ್ದರು.

ಕುರಿಗಾಹಿಯಾಗಿದ್ದ ಕಾಮೇಗೌಡ ಅವರು ಪರಿಸರ ಕಾಳಜಿಯನ್ನು ಹೊಂದಿದ್ದರು. ಪ್ರಾಣಿಗಳಿಗಾಗಿ ಕುಂದೂರು ಬೆಟ್ಟದ ಮೇಲೆ ಅವರೇ 16 ಕೆರೆಗಳನ್ನು ನಿರ್ಮಿಸಿದ್ದರು. ಸಾವಿರಾರು ಗಿಡಗಳನ್ನು ನೆಟ್ಟಿದ್ದರು. ಕುರಿ ಸಂರಕ್ಷಣೆಯ ಜೊತೆಗೆ ಪರಿಸರ ಕಾಳಜಿ ಇದ್ದವರು. ಕಾಮೇಗೌಡ ಅವರಿಗೆ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.

ಇನ್ನು ಕಾಮೇಗೌಡ ಅವರ ಸಾಧನೆಯನ್ನು ಪ್ರಧಾನಿ ಮೋದಿ ಅವರು ಹೊಗಳಿದ್ದರು. 2020ರ ಮನ್ ಕಿ ಬಾತ್ನಲ್ಲಿ, ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಕಾಮೇಗೌಡ ಅವರ ಕೆಲಸ ಎಲ್ಲರಿಗೂ ಅಚ್ಚರಿ ತರುತ್ತದೆ. ಅವರು ತಮ್ಮ ಕುರಿಗಾಹಿ ಕೆಲಸದ ಜೊತೆಗೆ 16 ಕೆರೆಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ಮಿಸಿದಂತ ಕೆರೆಗಳು ಬಹಳ ದೊಡ್ಡದಾಗಿರದೆ ಇರಬಹುದು. ಆದರೆ ಅವರ ಪ್ರಯತ್ನ ತುಂಬಾ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *