ಮಂಡ್ಯ: ಅಯ್ಯಪ್ಪನ ಮಾಲಾಧಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದ್ರೆ ಇದನ್ನು ಮೀರಿ ಮಾಲಾಧಾರಿಗಳು ಯಾತ್ರೆಗೆ ಹೊರಟಿದ್ದರು. ಆದ್ರೆ ಇದೀಗ ಅವರ ಮೇಲೆ ಕೇಸ್ ದಾಖಲಾಗಿದೆ.
ಕೆ ಆರ್ ಪೇಟೆ ತಾಲೂಕಿನ ಮಂಚೀಬೀಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ 15 ಜನ ಮಾಲಾಧಾರಿಗಳು ಶಬರಿ ಮಲೆಗೂ ಹೋಗುವ ಮುನ್ನ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಬಳಿಕ ಅವರೆಲ್ಲರಿಗೂ ಕೋವಿಡ್ ಪಾಸಿಟಿವ್ ದೃಢವಾಗಿತ್ತು. ಅಧಿಕಾರಿಗಳು ಅವರೆಲ್ಲರಿಗೂ ಹೋಂ ಐಸೋಲೇಷನ್ ನಲ್ಲಿರಲು ಸೂಚನೆ ನೀಡಲಾಗಿತ್ತು.
ಆದ್ರೆ ಮಾಲಾಧಾರಿಗಳು ಅಧಿಕಾರಿಗಳ ಮಾತನ್ನು ಕೇಳದೆ, ಅವರಿಗೆ ಯಾಮಾರಿಸಿ ಯಾತ್ರೆ ಕೈಗೊಂಡಿದ್ದರು. ಈ ವಿಚಾರ ತಿಳಿದ ಬಳಿಕ ತಹಶೀಲ್ದಾರ್ ರೂಒಅ ಅವರು ತಕ್ಷಣವೇ ಪೊಲೀಸರ ಸಹಾಯ ಪಡೆದು, ಯಾತ್ರಾರ್ಥಿಗಳನ್ನು ಪತ್ತೆ ಹಚ್ಚಿದ್ದಾರೆ. ಯಾತ್ರೆ ಕೈಗೊಂಡ 30 ಜನರ ವಿರುದ್ಧ ಕೆ ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.