in ,

ಖರೀದಿಸಿದ ವಸ್ತುಗಳಿಗೆ ಕಡ್ಡಾಯವಾಗಿ ರಸೀದಿ ಪಡೆಯಿರಿ : ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಹೇಳಿದ್ದೇನು ?

suddione whatsapp group join

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ

ದಾವಣಗೆರೆ(ಮಾ.17) : ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ಕಡ್ಡಾಯ ವಾಗಿ  ರಸೀದಿ ಪಡೆಯಬೇಕು ಏಕೆಂದರೆ ವಸ್ತುಗಳ ಸೇವೆಯಲ್ಲಿ ನೂನ್ಯತೆ   ಉಂಟಾದರೆ ಗ್ರಾಹಕ ನ್ಯಾಯಾಲಯಕ್ಕೆ ರಸೀದಿ ನೀಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು  ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್ ಈರಪ್ಪ ಶಿಗ್ಲಿ ಹೇಳಿದರು.

ಶುಕ್ರವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ  ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು ಸರಕು, ಸಾಮಾನು ಖರೀದಿ ಬಗ್ಗೆ ಎಲ್ಲರೂ ತಿಳುವಳಿಕೆ ಪಡೆದಿರಬೇಕು. ಪ್ರತಿ ವಸ್ತುವಿನ ಮೇಲೆ ಮುದ್ರಿಸಿರುವ ಅಂಶಗಳನ್ನು ಗಮನಿಸಿ ವಸ್ತುಗಳ ಖರೀದಿಗೆ ಮುಂದಾಗಬೇಕು ಎಂದರು.

ಬಳಕೆದಾರರು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಾರಾಟಗಾರರು  ಬೀಸುತ್ತಿರುವ ಬಲೆಯಲ್ಲಿ ಸಿಲುಕಿ ಗ್ರಾಹಕರು  ನಷ್ಟ, ನೋವು ಅನುಭವಿಸುತ್ತಿದ್ದಾರೆ ಎಂದರು                     ಗ್ರಾಹಕರನ್ನು ರಕ್ಷಿಸಲು ಸಾಕಷ್ಟು ಕಾನೂನುಗಳು ರಚಿತವಾಗಿವೆ ಅವುಗಳನ್ನು ತಿಳಿದುಕೊಂಡು ಗ್ರಾಹಕರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

ಸಾಮಾಜಿಕ ವ್ಯವಸ್ಥೆ, ನೀತಿ-ನಿಯಮಗಳು, ಕಟ್ಟುಪಾಡುಗಳು ಬದಲಾದ ಪರಿಣಾಮವಾಗಿ ಜಾರಿಗೆ ತರಲಾದ ಗ್ರಾಹಕರ ಹಿತರಕ್ಷಣಾ ಕಾಯ್ದೆ 2019 ರ ಪ್ರಕಾರ ₹50 ಲಕ್ಷದವರೆಗೆ ಗ್ರಾಹಕರ ಪರಿಹಾರ ಕಲ್ಪಿಸಿಕೊಡುವ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಸಿ. ಎಸ್ ತ್ಯಾಗರಾಜನ್ ಮಾತನಾಡಿ  ಗ್ರಾಹಕರ ಹಿತರಕ್ಷಣೆಗಾಗಿ ಉಚಿತವಾಗಿ ಕಾನೂನು ನೆರವು ನೀಡುವಂತಹ ಪ್ರತ್ಯೇಕ ಕಾನೂನುಗಳನ್ನು ರಚಿಸಲಾಗಿದೆ.

ಗ್ರಾಹಕರು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು  ಯುವಕರು ಕಾನೂನುಗಳನ್ನು ಅರಿತುಕೊಂಡು  ಕುಟುಂಬದ ಸದಸ್ಯರಿಗೆ, ಸಮಾಜದ ಜನರಿಗೆ ಅರಿವು ಮೂಡಿಸಬೇಕು  ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಗ್ರಾಹಕರಿಗೆ ಅರಿವು ಮೂಡಿಸಲು ವಿವಿಧ ಆಹಾರ ಧಾನ್ಯಗಳು ಹಾಗೂ ತೂಕ, ಅಳತೆ ಸಾಮಗ್ರಿಗಳ ಮೇಳವನ್ನು ಏರ್ಪಡಿಸಲಾಗಿತ್ತು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಶ್ರೀಮತಿ ಬಿ.ವಿ ಗೀತಾ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಹೆಚ್ ಅನಿತಾ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ  ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೈಲಜಾ,  ಆಹಾರ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಬಿ.ಟಿ. ಪ್ರಕಾಶ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಚುನಾವಣೆ ಕೆಲಸಗಳನ್ನು ಸಂತೋಷದಿಂದ ನಿರ್ವಹಿಸಿ : ಜಿ.ಪಂ.ಸಿಇಓ ಎಂ.ಎಸ್.ದಿವಾಕರ

ಮಾರ್ಚ್ 18,19 ಮತ್ತು 20 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ