ಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ವೀರಶೈವ ಲಿಂಗಾಯತ, ಉಪ ಜಾತಿ – ರಡ್ಡಿ ಲಿಂಗಾಯತ ಎಂದು ಬರೆಸಿ : ಡಾ.ಪಾಲಾಕ್ಷಪ್ಪ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 23 :  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಮನೆ ಮನೆ ಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ವೀರಶೈವ ಲಿಂಗಾಯತ ಉಪ ಜಾತಿ ರಡ್ಡಿ ಲಿಂಗಾಯತ, ಧರ್ಮ ಹಿಂದೂ ಎಂದು ಬರೆಸುವಂತೆ ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಡಾ.ಪಾಲಾಕ್ಷಪ್ಪ ಮನವಿ ಮಾಡಿದರು.

ಸಮಾಜದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚರ್ಚಿಸಿದ ಅವರು ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ಗಣತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂದೆ ಬರೆಸಬೇಕು. ಗಣತಿದಾರರು ಸಮೀಕ್ಷೆಗೆ ಬಂದಾಗ ನಿಖರವಾದ ಮಾಹಿತಿ ನೀಡಿ ಒಗ್ಗಟ್ಟು ಪ್ರದರ್ಶಿಸುವಂತೆ ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಬಾಂಧವರಲ್ಲಿ ಡಾ.ಪಾಲಾಕ್ಷಪ್ಪ ವಿನಂತಿಸಿದರು.

ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಗೌರವಾಧ್ಯಕ್ಷ ಜಿ.ಚಿದಾನಂದಪ್ಪ, ಉಪಾಧ್ಯಕ್ಷರುಗಳಾದ ಆರ್.ಡಿ.ತಿಪ್ಪೇಸ್ವಾಮಿ, ಎಂ.ವಿಜಯಕುಮಾರ್, ಎನ್.ಬಿ.ವಿಶ್ವನಾಥ್, ಖಜಾಂಚಿ ಕೆ.ಪಿ.ಬಸವರಾಜ್, ರವೀಂದ್ರ, ನಿರಂಜನಮೂರ್ತಿ, ಮಹಾಂತೇಶ್ ಹಾಗೂ ನಿರ್ದೇಶಕರುಗಳು ಸಭೆಯಲ್ಲಿ ಭಾಗವಹಿಸಿದ್ದರು.

Share This Article