ಚಿತ್ರದುರ್ಗ, (ಏ.30) : ಮನಮೈನಹಟ್ಟಿಯಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸಿ 15 ದಿನದಲ್ಲಿ ಸಮಸ್ಯೆ ಮುಕ್ತ ಗ್ರಾಮವಾಗಿ ಘೋಷಣೆ ಮಾಡಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿಯಲ್ಲಿ ಶನಿವಾರ (ಏ.30) 12 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮನಮೈನಹಟ್ಟಿಗೆ ರಾಜ್ಯ ತಾಂಡ ಅಭಿವೃದ್ದಿ ನಿಗಮದಿಂದ 40 ಲಕ್ಷ ಹಾಗೂ ಆದರ್ಶ ಗ್ರಾಮದಿಂದ 60 ಲಕ್ಷ ರೂಪಾಯಿಗಳನ್ನು ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಂಜೂರು ಮಾಡಲಾಗಿದೆ. ಲಂಬಾಣಿ ಸಮಾಜ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬೆಳೆಯಬೇಕು.
ರಾಜ್ಯದಲ್ಲಿನ 150 ಕೆಳಸಮುದಾಯಗಳ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ. ಎಸ್.ಸಿ ಮೀಸಲಾತಿ ಪ್ರಮಾಣವನ್ನು 15 ರಿಂದ 17 ಕ್ಕೆ ಎಸ್.ಟಿ. ಮೀಸಲಾತಿಯನ್ನು 3.5 ರಿಂದ 7 ಕ್ಕೆ ಹೆಚ್ಚಿಸವ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿಲಾಗಿದೆ. ಸರ್ಕಾರ ಈ ಭಾಗದ ಜಲ್ವಂತ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಭದ್ರ ಮೇಲ್ದಂಡೆ ಯೋಜನೆಗೆ 3500 ಕೋಟಿ ಹಣ ನೀಡಲಾಗಿದೆ. ಪ್ರತಿ ಹಳ್ಳಿಗೆ ತುಂಗಭದ್ರ ನದಿ ನೀರು ಕೊಡುತ್ತೇವೆ. ಪ್ರಕೃತಿ ಸಹಾಯದಿಂದ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಪರಿಹಾರವಾಗಿದೆ. ಭ್ರಷ್ಟಾಚರಕ್ಕೆ ಸರ್ಕಾರ ಕಡಿವಾಣ ಹಾಕಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ನೀಡುತ್ತಿದ್ದ 5 ಅಕ್ಕಿಯನ್ನು 10 ಕೆ.ಜಿ. ಏರಿಸಲಾಗಿದೆ.
ಕ್ಷೇತ್ರದ ಜನರ ಕರುಣೆ ನನ್ನ ಮೇಲಿದೆ. ಕೇವಲ ನಾಮಪತ್ರ ಸಲ್ಲಿಸಿದಕ್ಕೆ ಮತ ನೀಡಿ ಗೆಲಸಿದ್ದಾರೆ. ಜೀವತವಾಧಿಯಲ್ಲಿ ನಿಮ್ಮ ಋಣ ತಿರೀಸಲಾಗುವುದಿಲ್ಲ ಎಂದು ಸಚಿವ ಶ್ರೀರಾಮುಲು ಭಾವುಕವಾಗಿ ಹೇಳಿದರು. ಮನಮೈನಹಟ್ಟಿಯನ್ನು ಕಂದಾಯ ಗ್ರಾಮವಾಗಿ ಘೋಷಣೆ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ನಂತರ ಸಚಿವ ಬಿ.ಶ್ರೀರಾಮುಲು ಅವರು ಬೋಸೆದೇವರಹಟ್ಟಿಯಲ್ಲಿ 12 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಹಶೀಲ್ದಾರ್ ಟಿ.ರಘುಮೂರ್ತಿ, ಯೋಜನೆ ಅಭಿಯಂತರು ಎಸ್.ತಿಪ್ಪೇಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಮುಖಂಡರಾದ ಕಾಲುವೆಹಳ್ಳಿ ಶ್ರೀನಿವಾಸ್,ಜಿ.ಪಿ. ಪಾಲಯ್ಯ, ರಾಮರೆಡ್ಡಿ, ಪಾಪೇಶ್ ನಾಯ್ಕೆ , ನಿರಂಜನ್, ಮಂಜುನಾಥ ಗುಡಿ ಹಳ್ಳಿ ಸೇರಿದಂತೆ ಗ್ರಾಮದ ಮುಖ್ಯಸ್ಥರು ಇದ್ದರು.