ಚಿತ್ರದುರ್ಗ: ಬುರುಡುಕುಂಟೆ ಗ್ರಾಮದಲ್ಲಿ ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಂಜಾವಧೂತ ಸ್ವಾಮೀಜಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದ್ರೆ ಈ ವೇಳೆ ಮೀಸಲಾತಿ ವಿಚಾರಕ್ಕೆ ನಂಜಾವಧೂತ ಸ್ವಾಮೀಜಿ ಹಾಗೂ ಸಮುದಾಯದ ಮುಖಂಡರೊಬ್ಬರಿಗೂ ವಾಗ್ವಾದ ನಡೆದಿದೆ.
ಒಕ್ಕಲಿಗರ ಮೀಸಲಾತಿ ವಿಚಾರಕ್ಕೆ ನಂಜಾವಧೂತ ಸ್ವಾಮೀಜಿ ಜೊತೆಗೆ ಜಗಳಕ್ಕೆ ನಿಂತ ವ್ಯಕ್ತಿ..! pic.twitter.com/2KQhBdEG4W
— suddione-kannada News (@suddione) November 14, 2022
ನಂಜಾವಧೂತ ಸ್ವಾಮೀಜಿ ಮಾತನಾಡುವಾಗ, ಈ ಸಮಾಜದಲ್ಲಿ ಶೇಕಡ 16ಕ್ಕೂ ಒಕ್ಕಲಿಗರ ಸಮುದಾಯವಿದೆ. ಆದ್ರೆ ಮೀಸಲಾತಿ ವಿಚಾರದಲ್ಲಿ ಮಕ್ಕಳಿಗೆ ಅನ್ಯಾಯವಾಗಿದೆ. ಹೀಗಾಗಿ ಶೇಕಡ 11ರಿಂದ 15ರಷ್ಟು ಮೀಸಲಾತಿ ಬೇಕಾಗಿದೆ ಎಂದು ತಮ್ಮ ಭಾಷಣದಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿಯೇ ಇದ್ದ ಸಮುದಾಯದ ಮುಖಂಡರೊಬ್ಬರು, ಸ್ವಾಮೀಜಿ ಭಾಷಣದ ನಡುವೆಯೇ ರಿಯಾಕ್ಟ್ ಮಾಡಿದ್ದಾರೆ.
ಸ್ವಾಮೀಜಿಗಳೇ ಕುಂಚಿಟಿಗರ ಮೀಸಲಾತಿ ಬಗ್ಗೆಯೂ ಯಾಕೆ ಮಾತನಾಡುತ್ತಿಲ್ಲ ಎಂದು ಶ್ರೀಗಳಿಗೆ ಪ್ರಶ್ನೆ ಹಾಕಿದ್ದಾರೆ. ಈ ವೇಳೆ ನಂಜಾವಧೂತ ಸ್ವಾಮೀಜಿಗಳು ಆ ವ್ಯಕ್ತಿಯನ್ನು ಸುಮ್ಮನೆ ಇರುವುದಕ್ಕೆ ಹೇಳಿದ್ದಾರೆ. ಏ ಸುಮ್ಮನೆ ಇರಪ್ಪ, ಮೊದಲು ಇಲ್ಲಿ ಕೇಳಪ್ಪ ಎಂದು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ವೇದಿಕೆ ಮೇಲೆ ಕುಳಿತಿದ್ದ ನಿಖಿಲ್ ಕುಮಾರಸ್ವಾಮಿ ಅವರ ಗಮನವನ್ನು ಸೆಳೆಯಲು ಆ ವ್ಯಕ್ತಿ ಪ್ರಯತ್ನ ಪಟ್ಟಿದ್ದಾರೆ.
ನಿಖಿಲ್ ಅಣ್ಣ ದಯವಿಟ್ಟು ಅವಕಾಶ ಮಾಡಿಕೊಡಬೇಕು ಎಂದು ಕೂಗಾಡಿದ್ದಾನೆ. ನಂತರ ನಿಖಿಲ್ ಕುಮಾರಸ್ವಾಮಿ ಕೂಡ ಆ ವ್ಯಕ್ತಿಗೆ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಒಕ್ಕಲಿಗರ ಜನಸಂಖ್ಯೆ ಶೇಕಡ 3ರಷ್ಟಿದೆ. ಶೇಕಡ 10 ರಷ್ಟು ಮೀಸಲಾತಿ ನೀಡುವ ವಿಚಾರ ತುಂಬಾ ಒಳ್ಳೆಯದ್ದೆ. ಆದರೆ ಇದರಿಂದ ಶೇಕಡ 16ರಿಂದ 19ರಷ್ಟಿರುವ ಒಕ್ಕಲಿಗರಿಗೆ ಅನ್ಯಾಯವಾಗುತ್ತೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ದೇವೇಗೌಡ ಅವರು ಪತ್ರ ಬರೆದಿದ್ದಾರೆ ಎಂದಿದ್ದಾರೆ.