ಸುದ್ದಿಒನ್, ಹಿರಿಯೂರು, ಮಾರ್ಚ್. 29 : ತೆಂಗಿನ ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಅಂಗಲಗೆರೆ ಗ್ರಾಮದ ಎಚ್.ತಿಮ್ಮಯ್ಯ ಅವರ ಜಮೀನಿನಲ್ಲಿ ಶುಕ್ರವಾರ ನಡೆದಿದೆ.

ತಾಲೂಕಿನ ಖಂಡನೇಹಳ್ಳಿ ಗ್ರಾಮದ ತಿಮ್ಮರಾಯ(50) ಮೃತ ವ್ಯಕ್ತಿ. ಮೃತ ತಿಮ್ಮರಾಯ ಕಳೆದ ಕಳೆದ ಎರ‍್ಮೂರು ತಿಂಗಳಿನಿಂದ ಅಂಬಲಗೆರೆ ಗ್ರಾಮದ ಎಚ್.ತಿಮ್ಮಯ್ಯ ಅವರ ತೆಂಗಿನ ತೋಟದಲ್ಲಿ ವಾಸವಿದ್ದು ತೋಟ ಕಾಯುವ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ ತೆಂಗಿನ ಕಾಯಿ ಕೀಳಲು ಮರ ಹತ್ತಿ ಕಾಯಿ ಕೀಳುತ್ತಿರುವಾಗ ಕಾಲು ಜಾರಿ ಬಿದ್ದು, ಮೃತ ಮಪಟ್ಟಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.


