ಚಿತ್ರದುರ್ಗ,(ಜನವರಿ.06) : ಅಕ್ರಮವಾಗಿ ಗಾಂಜಾ ಮಾರಾಟ ಮತ್ತು ಸಾಗಣೆ ಮಾಡುತ್ತಿದ್ದ ಮಂಜುಳಾಗೆ ಜಿಲ್ಲಾ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡವನ್ನು ವಿಧಿಸಿ ಜನವರಿ 5 ರಂದು ತೀರ್ಪು ನೀಡಿದೆ ಎಂದು ಅಬಕಾರಿ ಉಪ ಆಯುಕ್ತಾದ ನಾಗಶಯನ ತಿಳಿಸಿದ್ದಾರೆ.
ಕೂಡ್ಲಗಿ ತಾಲೂಕಿನ ಐಯ್ಯನಹಳ್ಳಿ ಗ್ರಾಮದ ಮಂಜುಳಾ ಎಂಬುವಳು 2019 ರ ಡಿಸೆಂಬರ್ 26 ರಂದು ಚಿತ್ರದುರ್ಗ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-50 ರ ಚಿಕ್ಕಗೂಂಡನಹಳ್ಳಿ ಸಮೀಪ ಭಾರತ್ ಪೆಟ್ರೋಲಿಯಂ ಹತ್ತಿರ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದರು. ಇವರನ್ನು ಬಂಧಿಸಿ 7.500 ಕೆಜಿ ಒಣ ಗಾಂಜಾ ವಶಪಡಿಸಿಕೊಂಡು ಎನ್.ಡಿ.ಪಿ.ಎಸ್.ಕಾಯ್ದೆಯಡಿ ಪ್ರಕರಣವನ್ನು ಅಬಕಾರಿ ನಿರೀಕ್ಷಕರಾದ ಹೆಚ್ ದೇವರಾಜ್ ದಾಖಲಿಸಿದ್ದರು. ಇವರ ವಿರುದ್ಧ ಘನ ನ್ಯಾಯಾಲಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ.