Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮಾಲೂರು ಕಾಂಗ್ರೆಸ್ ಶಾಸಕನ ಶಾಸಕತ್ವ ಅಸಿಂಧು..!

---Advertisement---

ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಶಾಸಕತ್ವವನ್ನು ಹೈಕೋರ್ಟ್ ಅಸಿಂಧುಗೊಳಿದೆ. ನಾಲ್ಕು ವಾರಗಳಲ್ಲಿ ಮರು ಮತ ಎಣಿಕೆಗೆ ಸೂಚನೆಯನ್ನು ನೀಡಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋವನ್ನು ಸಲ್ಲಿಸಿಲ್ಲ. ಹೀಗಾಗಿ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಸೂಚನೆಯನ್ನ, ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ಪೀಠ ಮಹತ್ವದ ಆದೇಶವನ್ನ ಹೊರಡಿಸಿದೆ. ಕೇವಲ 248 ಮತಗಳ ಅಂತರದಿಂದ ನಂಜೇಗೌಡ ಅವರು ಗೆದ್ದಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಅವರು ದೂರನ್ನು ದಾಖಲಿಸಿದ್ದರು. ಕಳೆದ ಎರಡು ವರ್ಷದಿಂದ ಈ ಸಂಬಂಧ ವಾದ ಪ್ರತಿವಾದ ನಡೆಯುತ್ತಲೆ ಇತ್ತು. ಕೊನೆಗೂ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಇದರ ನಡುವೆ 30 ದಿನಗಳ ತಡೆಯನ್ನು ನೀಡಿದೆ.

ಏನಿದು ಮಾಲೂರು ಕೇಸ್..?

ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ.15 ಅಭ್ಯರ್ಥಿಗಳ ಪರ ಏಜೆಂಟರಿಗೂ ವ್ಯವಸ್ಥೆ ಕಲ್ಪಿಸಿರಲಿಲ್ಲ. ಒಂದೇ ಕೊಠಡಿಯಲ್ಲಿ ಮತ ಎಣಿಕೆ ನಡೆಯಬೇಕಿತ್ತು. ಆದರೆ ಎರಡು ಪ್ರತ್ಯೇಕ ಕೊಠಡಿಯಲ್ಲಿ ಮತ ಎಣಿಕೆ ನಡೆದಿತ್ತು. ಮತ ಎಣಿಕೆ ನಡೆದದ್ದರ ವಿಡಿಯೋ ರೆಕಾರ್ಡ್ ಅನ್ನು ಕೂಡ ಜಿಲ್ಲಾ ಚುನಾವಣಾ ಅಧಿಕಾರಿಗೆ ಸಲ್ಲಿಸಿರಲಿಲ್ಲ. ಹೀಗಾಗಿ ಜಿಲ್ಲಾ ಚುನಾವಣಾ ಅಧಿಕಾರು ವಿರುದ್ಧವೂ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಈ ಸಂಬಂಧ ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಜುನಾಥ್ ಮಾತನಾಡಿ, ನಮ್ಮದು ತಡವಾಯ್ತು ಅಷ್ಟರ. ನ್ಯಾಯಾಲಯದ ವ್ಯವಸ್ಥೆ ಮೇಲೆ ನಮಗೂ ನಂಬಿಕೆ ಇತ್ತು. ಅಲ್ಲಿನ ಎಲ್ಲಾ ರೆಕಾರ್ಡ್ ಅನ್ನು ನಾಶ ಮಾಡಿದ್ದಾರೆ. ಬೇಕು ಬೇಕಂತಲೆರ ಕೋರ್ಟ್ ಗೆ ಬರ್ತಾ ಇರಲಿಲ್ಲ. ಏನೇ ಪ್ರಯತ್ನ ಮಾಡಿದ್ರು ಕಡೆಗೆ ನ್ಯಾಯ ಗೆಲ್ತು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...