ಮಾಲೂರು ವಿಧಾನಸಭಾ ಕ್ಷೇತ್ರ ಮರು ಮತ ಎಣಿಕೆ : ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

1 Min Read

ನವದೆಹಲಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ 2023ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು. ಇದೇ ತೀರ್ಪನ್ನ ಇದೀಗ ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್ ಕೂಡ ಮರು ಮತ ಎಣಿಕೆ ಮಾಡಲು ಆದೇಶ ನೀಡಿದೆ.

ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದ ಕೋರ್ಟ್ ಮತ್ತೊಂದು ವಿಚಾರವನ್ನು ತಿಳಿಸಿದೆ. ಮರು ಮತ ಎಣಿಕೆ ನಡೆದ ಮೇಲೆ ಯಾವುದೇ ಕಾರಣಕ್ಕೂ ಫಲಿತಾಂಶವನ್ನು ಘೋಷಣೆ ಮಾಡುವಂತಿಲ್ಲ. ಮುಚ್ಚಿದ ಲಕೋಟೆಯಲ್ಲಿಯೇ ಇಡಬೇಕು ಎಂದು ತಿಳಿಸಿದೆ. ಈ ಮೂಲಕ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡರಿಗೆ ರಿಲೀಫ್ ಸಿಕ್ಕಂತಾಗಿದೆ.

ಶಾಸಕ ಕೆವೈ ನಂಜೇಗೌಡ ಆಯ್ಕೆ ಅಸಿಂಧು ಎಂದು ಸೆಪ್ಟೆಂಬರ್16ರಂದು ಹೈಕೋರ್ಟ್ ತೀರ್ಪು ಪ್ರಕಟ ಮಾಡಿತ್ತು. ಸುಪ್ರೀಂ ಕೋರ್ಟ್ ಗೆ ಮೇಲ್ಮನವು ಸಲ್ಲಿಸಲು ಒಂದು ತಿಂಗಳ ಕಾಲವಕಾಶವನ್ನು ನೀಡಲಾಗಿತ್ತು. ಅಲ್ಲದೆ ಮೇಲ್ಮನವಿ ಸಲ್ಲಿಸುವವರೆಗೆ ಆದೇಶವನ್ನು ತಟಸ್ಥವಾಗಿ ಇರಿಸುವಂತೆ ನಿರ್ದೇಶನ ನೀಡಿತ್ತು.

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಂಜೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ ನ್ಯಾಯ ಸಿಕ್ಕಿದೆ. ಸಂತೋಷ ಆಗ್ತಾ ಇದೆ. ಹೈಕೋರ್ಟ್ ನಲ್ಲಿ ಕೇಸ್ ಹಾಕಿಕೊಂಡಾಗ ಬಿಜೆಪಿ ಅಭ್ಯರ್ಥಿಹೆ ಹೇಳಿದ್ದೆ. ಮರು ಮತ ಎಣಿಕೆಗೆ ನಾನು ಬೇಡ ಎನ್ನಲ್ಲ ಎಂದಿದ್ದೆ. ಮರು ಮತ ಎಣಿಕೆ ಜೊತೆಗೆ ಅಸಿಂಧು ಎಂದು ಆದೇಶವಾಗಿತ್ತು. ಹಾಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದೆ. ಅಸಿಂಧು ಎಂಬ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮರು ಮತ ಎಣಿಕೆ ಆದರೂ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

Share This Article