ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಮೂರು ಪಕ್ಷಗಳು ಹೊಸ ಹೊಸ ಗೇಮ್ ಪ್ಲ್ಯಾನ್ ಮಾಡುತ್ತೇವೆ. ಗೆಲ್ಲುವ ದಾರಿ ಕಂಡುಕೊಳ್ಳುತ್ತಿವೆ. ಆಪರೇಷನ್ ಹಸ್ತ, ಮೈತ್ರಿ ಈ ವಿಚಾರಗಳೇ ಸಾಕಷ್ಟು ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಅಭ್ಯರ್ಥಿಗಳ ಕ್ಷೇತ್ರ ಆಯ್ಕೆಯೂ ಚರ್ಚೆಯಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರ ಪ್ರದೇಶದಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.
ಕಾಂಗ್ರೆಸ್ ಕೂಡ ಇದೇ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಅದಕ್ಕೆ ಕಾರಣವೂ ಇದೆ. ಉತ್ತರಪ್ರದೇಶದಲ್ಲಿ ಮಾಯಾವತಿ ಅವರ ಬಿಎಸ್ಪಿ ಪಕ್ಷ ಈಗ ದುರ್ಬಲವಾಗಿದೆಯಂತೆ. ದಲಿತ ಮತಗಳು ಬಿಎಸ್ಪಿ ಪಕ್ಷಕ್ಕೆ ಹೋಗುವುದಿಲ್ಲ ಎಂಬ ಮಾತಿದೆ. ಹೀಗಾಗಿ ದಲಿತ ಮತಗಳನ್ನು ಕಾಂಗ್ರೆಸ್ ನತ್ತ ಸೆಳೆಯುವುದಕ್ಕೆ ಪ್ಲ್ಯಾನ್ ನಡೆಯುತ್ತಿದೆಯಂತೆ. ಒಂದು ವೇಳೆ ಖರ್ಗೆ ಅವರು ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡಿದರೆ ದಲಿತ ಮತಗಳನ್ನು ಕಾಂಗ್ರೆಸ್ ನತ್ತ ಸೆಳೆಯಬಹುದು ಎಂಬುದೇ ಆಗಿದೆ.
ಬಿಜೆಪಿ ಸೋಲಿಸುವುದಕ್ಕೆ ವಿಪಕ್ಷಗಳೆಲ್ಲವೂ ಒಟ್ಟಾಗಿಯೂ ಆಗಿದೆ. ಹೀಗಾಗಿ ಬೇರೆ ಬೇರೆ ಸ್ಟಾಟರ್ಜಿ ಬಳಕೆ ಮಾಡಿಕೊಳ್ಳುತ್ತಿದೆ ಕಾಂಗ್ರೆಸ್. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ಪ್ರದೇಶದಿಂದಾನೇ ಸ್ಪರ್ಧೆ ಮಾಡುವುದು ಖಚಿತವಾದರೆ ಇಟವಾ ಅಥವಾ ಬಾರಬಂಕಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಕ್ಷೇತ್ರದಲ್ಲಿ ಖರ್ಗೆ ಅವರು ಸ್ಪರ್ಧಿಸಿದರೆ ದಲಿತ ಮತಗಳನ್ನು ಕ್ರೋಢೀಕರಿಸಬೇಕಾಗಿದೆ. ಅದಕ್ಕೆ ಸಮಾಜವಾದಿ ಪಕ್ಷದ ಬೆಂಬಲವೂ ಅಗತ್ಯವಾಗಿದೆ.