ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆ ಅವರು ಮೊನ್ನೆ ಮೈಸೂರಲ್ಲಿ ಭಾಷಣ ಮಾಡ್ತಾ, ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಅನ್ನೋದನ್ನು ಮರೆತು, ಅವರು ಎಐಸಿಸಿ ಅಧ್ಯಕ್ಷರು ಎಂಬುದನ್ನು ಮರೆತು, ನರೇಂದ್ರ ಮೋದಿಯವರು ಬೊಗಳುತ್ತಾರೆ ಎಂಬ ಪದವನ್ನು ಬಳಸಿದ್ದಾರೆ. ನನಗೆ ಈ ಪದ ತುಂಬಾ ನೋವು ಕೊಟ್ಟಿದೆ. ಹಿರಿಯರು ಅವರು, ಎಐಸಿಸಿ ಅಧ್ಯಕ್ಷರು. ದಯವಿಟ್ಟು ನಾನು ಅವರಿಗೆ ಪ್ರಾರ್ಥನೆ ಮಾಡ್ತೀನಿ. ನೀವೂ ಹೇಳಿರುವಂತ ಪದ ಸರಿಯಿಲ್ಲ. ದೇಶದ ಜನರ ಕ್ಷಮೆ ಕೇಳಬೇಕು, ನರೇಂದ್ರ ಮೋದಿಯವರ ಕ್ಷಮೆ ಕೇಳಬೇಕು ಅಂತ ಒತ್ತಾಯವನ್ನು ಈ ಸಂದರ್ಭದಲ್ಲಿ ಮಾಡುತ್ತೇನೆ.
ಅವರ ಮಗ ಪ್ರಿಯಾಂಕ್ ಖರ್ಗೆ ಅವನು ಬೊಗಳುತ್ತಲೇ ಇರುತ್ತಾನೆ. ಆರ್ ಎಸ್ ಎಸ್ ಬಗ್ಗೆ ಬೊಗಳುತ್ತಾನೆ, ಮೋದಿ ಬಗ್ಗೆ ಬೊಗಳುತ್ತಾನೆ, ನಾನು ಅವನ ಬಗ್ಗೆ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಈ ಮಟ್ಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಹೋಗುವುದು ಸೂಕ್ತ ಅಲ್ಲ ಎಂಬುದು ನನಗೆ ಅನ್ನಿಸಿದೆ. ನಾನು ಅವರಿಗೆ ಪ್ರಾರ್ಥನೆ ಮಾಡ್ತೇನೆ. ಇಡೀ ದೇಶ ಗಮನಿಸಿದೆ ನೀವೂ ನರೇಂದ್ರ ಮೋದಿಯವರಿಗೆ ಬಳಸಿದಂತ ಪದ. ಇಡೀ ದೇಶ ನಿಮಗೆ ಛೀಮಾರಿ ಹಾಕಿದ್ರೆ ಒಳ್ಲೆಯದ್ದಲ್ಲ. ದಯವಿಟ್ಟು ಕ್ಷಮೆ ಕೇಳ್ಬೇಕು ಅಂತ ಒತ್ತಾಯ ಮಾಡ್ತೇನೆ ಎಂದಿದ್ದಾರೆ.
ಇದೆ ವೇಳೆ ಸ್ವಾಮೀಜಿಗಳ ಬಗ್ಗೆ ಮಾತನಾಡಿ, ಹಿಂದೂ ಸಮಾಜದ ಎಲ್ಲಾ ಜಾತಿಗಳಿಗೂ ಕೂಡ ಗುರುಗಳು ಇದಾರೆ. ಆ ಗುರುಗಳಲ್ಲೇ ಅನೇಕ ಜಾತಿಗಳಲ್ಲಿ ಹೊಂದಾಣಿಕೆ ಇಲ್ಲ. ಆದರೆ ಪಂಚಪೀಠದಲ್ಲಿ ಕಾಶಿ, ಶ್ರೀಶೈಲ, ಕೇದರಾನಾಥ, ಉಜ್ಜೈನಿ, ಬಾಳೆಹೊನ್ನೂರು, ರಂಭಾಪುರಿ ಈ ಐದು ಪೀಠಗಳು ಕೂಡ ಏನೋ ಕಾರಣಕ್ಕೆ ಒಡೆದಾಗಿದೆ. 16 ವರ್ಷದಿಂದ ಒಟ್ಟಿಗೆ ಇರಲಿಲ್ಲ. ನೀವೇ ಮಾರ್ಗದರ್ಶನ ಮಾಡೋರು. ಮಾನವ ಕುಲಕ್ಕೆ ಒಳಿತಾಗಲಿ ಎಂಬ ಘೋಷಣೆ ಕೊಡ್ತಾ ಇರೋರು ನೀವೆ. ನೀವೇ ಹೊಂದಾಗದೆ ಇದ್ರೆ ಹೇಗೆ ಅಂತ ಕೇಳಿದ್ದೆ. ಇವತ್ತಲ್ಲ ನಾಳೆ ಒಂದಾಗೇ ಆಗ್ತೀವಿ ಎಂದಿದ್ದರು. ಭಗವಂತನ ದಯೆಯಿಂದ ನಿನ್ನೆ ಅಷ್ಟುಜನ ಒಂದಾಗಿದ್ದಾರೆ ಎಂದಿದ್ದಾರೆ.
