ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೇ ಸಿಎಂ ಕಚ್ಚಾಟ ಜೋರಾಗಿದೆ. ಎರಡೂವರೆ ವರ್ಷವಾದ ಮೇಲೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ಬಿಟ್ಟುಕೊಡಬೇಕು ಎಂಬ ಮಾತುಗಳು ಕೇಳಿ ಬರ್ತಾ ಇದೆ. ಆದರೆ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಎಂಬುದನ್ನು ಹೇಳಿದ್ದಾರೆ. ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುವ ಸಾಧ್ಯತೆ ಕಾಣಿಸ್ತಾ ಇದೆ ಎಂಬ ಮಾತುಗಳು ಕೂಡ ಕೇಳಿ ಬರ್ತಾ ಇದೆ.
ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಆಗುವುದಕ್ಕೂ ಅರ್ಹರು ಎನ್ನುತ್ತಿದೆ ಕಾಂಗ್ರೆಸ್ ವಲಯ. ಈ ಬಗ್ಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದಂತೆ ಬಸವರಾಜ್ ರಾಯರೆಡ್ಡಿ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರ್ತಾರಾ..? ರಾಷ್ಟ್ರ ರಾಜಕಾರಣದಲ್ಲಿಯೇ ಪ್ರಧಾನಿ ಆಗ್ತಾರಾ ಎಂಬುದನ್ನ ನೋಡಬೇಕಿದೆ. ಹಾಗಾದ್ರೆ ಬಸವರಾಜ್ ರಾಯರೆಡ್ಡಿ ಹೇಳಿದ್ದೇನು..?
ಇಂದು ಸುದ್ದಿಗೋಷ್ಠಿ ವೇಳೆ ಈ ವಿಚಾರವನ್ನ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿಯಾಗುವುದಕ್ಕೆ ಅರ್ಹ ವ್ಯಕ್ತಿ ಎಂದಿದ್ದಾರೆ. ಅಷ್ಟೇ ಅಲ್ಲ ತಮ್ಮ ಮಾತನ್ನ ಇದೇ ವೇಳೆ ಸಮರ್ಥನೆ ಮಾಡಿಕೊಂಡಿದ್ದು, ಖರ್ಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಎಐಸಿಸಿ ಅಧ್ಯಕ್ಷ ಮಾಡಬೇಕು ಎಂದು ಹೇಳಿದ್ದು ನಾನೇ. ಹಾಗೇ ಪ್ರಧಾನ ಮಂತ್ರಿಯಾಗುವುದಕ್ಕೆ ಅವರು ಅರ್ಹ ವ್ಯಕ್ತಿ ಎಂಬುದನ್ನು ಬೆಳಗಾವಿ ಅಧಿವೇಶನದಲ್ಲೂ ಹೇಳಿದ್ದೆ ಎಂಬುದನ್ನು ಮತ್ತೆ ಉಚ್ಛಾರ ಮಾಡಿದ್ದಾರೆ.
ರಾಜ್ಯದಲ್ಲಿ ಸಿಎಂ ಸ್ಥಾನಕ್ಕೂ, ರಾಷ್ಟ್ರದಲ್ಲಿ ಪಿಎಂ ಸ್ಥಾನಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೇ ಕೇಳಿ ಬರ್ತಾ ಇದೆ. ಮುಂದಿನ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಏನ್ಮಾಡ್ತಾರೆ ಅಂತ ನೋಡಬೇಕಿದೆ.
