ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 12 : ಮಲ್ಲಾಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅಂಬೇಡ್ಕರ್ ಸೇವಾ ಸಮತಿಯಿಂದ ಗುರುವಾರ ನೋಟ್ಬುಕ್ಗಳನ್ನು ವಿತರಿಸಲಾಯಿತು.
ತಾಲ್ಲೂಕು ಕೆ.ಡಿ.ಪಿ. ಸದಸ್ಯ ಸಿ.ಬಿ.ನಾಗರಾಜ್ ನಂದಿಪುರ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡುತ್ತ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರ ಜೊತೆ ಸಂಘ ಸಂಸ್ಥೆಗಳವರು ದಾನಿಗಳು ನೀಡುವ ನೆರವನ್ನು ಪಡೆದುಕೊಂಡು ಶಿಕ್ಷಣವಂತರಾಗುವಂತೆ ಹೇಳಿದರು.
ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಾದಾರ ಚನ್ನಯ್ಯ ಮಠದ ಆನಂದಪ್ಪ, ಪವನ್ಕುಮಾರ್, ವಿಕಾಸ್, ರಾಜಪ್ಪ ಹೆಚ್. ಕೀರ್ತಿಸಾಗರ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನಮ್ಮ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸಿದ್ದಲಿಂಗಮ್ಮ, ಗುರುಮೂರ್ತಿ, ಗಜೇಂದ್ರ ಹಾಗೂ ಅಂಬೇಡ್ಕರ್ ಸೇವಾ ಸಮಿತಿ ಸದಸ್ಯರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.






