Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಅನನ್ಯ ಆಗಿದ್ದ ಮಾಲಾಶ್ರೀ ಮಗಳು ರಾಧಾನ ಆದ್ರೂ ಈಗ ಮತ್ತೆ ಹೆಸರು ಬದಲು : ಏನಂತ ಗೊತ್ತಾ..?

---Advertisement---

 

 

ಮಾಲಾಶ್ರೀ ಮಗಳು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ದಿವಂಗತ ಕೋಟಿ ರಾಮುಗೆ ದೊಡ್ಡ ಕನಸಾಗಿತ್ತು. ಈಗ ಆ ಕನಸು ನನಸಾಗುತ್ತಿದೆ. ಸಿನಿಮಾರಂಗಕ್ಕೆ ಬಂದ ಮಾಲಾಶ್ರೀ ಮಗಳು ರಾಧಾನ ರಾಮ್ ಆಗಿ‌ ಪರಿಚಯವಾಗಿದ್ದರು. ಆದ್ರೆ ಇದೀಗ ಮತ್ತೆ ಹೆಸರು ಬದಲಾಯಿಸಿಕೊಂಡಿದ್ದಾರೆ.

ಈ ಮುಂಚೆಯೂ ಹೆಸರು ಬದಲಾಯಿಸಿಕೊಂಡೇ ಚಿತ್ರರಂಗಕ್ಕೆ ಬಂದಿದ್ದರು. ಈ ಮೊದಲು ಅನನ್ಯ ರಾಮು ಅಂತ ಇದ್ದ ಹೆಸರನ್ನು ರಾಧಾನ ರಾಮ್ ಆಗಿ ಹೆಸರು ಬದಲಾಯಿಸಿಕೊಂಡಿದ್ದರು. ಈಗ ರಾಧಾನ ಬದಲಾಗಿ ಆರಾಧಾನ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ಮಗಳ ಹೆಸರು ಬದಲಾದ ಮೇಲೆ ಮಾಲಾಶ್ರೀ ಮಾಹಿತಿ ನೀಡಿದ್ದಾರೆ. ಇನ್ಮುಂದೆ ನನ್ನ ಮಗಳ ಹೆಸರು ಆರಾಧನಾ. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು ವಿನಂತಿ ಮಾಡಿದ್ದಾರೆ.

ರಾಧಾನ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ರಾಧನಾ ರಾಮ! ಇಂದಿನಿಂದ ನನ್ನ ಹೆಸರು ಆರಾಧನಾ ಎಂದು ನಿಮಗೆ ಸುದ್ದಿ ನೀಡಲು ನಾನು ಬಯಸುತ್ತೇನೆ!ಈ ಬದಲಾವಣೆಗಾಗಿ ನಿಮ್ಮೆಲ್ಲರ ಆಶೀರ್ವಾದವನ್ನು ನೀಡಬೇಕೆಂದು ನಾನು ಕೇಳುತ್ತೇನೆ.ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು, ಮತ್ತು ಇದು ಯಾವಾಗಲೂ ನನ್ನೊಂದಿಗೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Join WhatsApp

Join Now

Join Telegram

Join Now

Leave a Comment