ದಾವಣಗೆರೆಯಲ್ಲಿ ಆಗಸ್ಟ್ 4 ರಿಂದ 13 ರವರೆಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಬೆಳ್ಳಿಯ ಆಭರಣಗಳ ಪ್ರದರ್ಶನ

suddionenews
2 Min Read

 

ಸುದ್ದಿಒನ್, ದಾವಣಗೆರೆ, (ಆ.05): ವಿಶ್ವದ ಅತಿದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಜಾಲಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ನಗರದ ಶೋರೂಂನಲ್ಲಿ ಸಿಲ್ವರ್ ಶೋಗೆ ಗ್ರಾಹಕ ರಾದ ಪ್ರತಿಭಾ ಮತ್ತು ಶಶಿಕಲಾ ಇವರುಗಳು ಚಾಲನೆ ನೀಡಿದರು. ಹೊಚ್ಚ ಹೊಸದಾದ ಬೆಳ್ಳಿಯ ಆಭರಣ ಮತ್ತಿತರೆ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸುತ್ತಿದೆ.

ಆಗಸ್ಟ್ 4 ರಿಂದ 13 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರೆ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್‍ನ ಮುಖ್ಯಸ್ಥರಾದ ಬೆಸಿಲ್‍ರಾಜನ್ ಮತ್ತು ಗ್ರಾಹಕರು ಉಪಸ್ಥಿತರಿದ್ದರು. ತನ್ನ ಗ್ರಾಹಕರಿಗೆ 10 ಮಲಬಾರ್ ಭರವಸೆಗಳನ್ನು ನೀಡುತ್ತಿದೆ. ಇದರಲ್ಲಿ ಪ್ರಮುಖವಾಗಿ ಪಾರದರ್ಶಕ ದರ ಪಟ್ಟಿ, ಸ್ಟೋನ್‍ನ ನಿಖರ ತೂಕ, ನಿವ್ವಳ ತೂಕ, ಆಭರಣದ ಸ್ಟೋನ್ ದರ, ಆಭರಣಕ್ಕೆ ಭರವಸೆಯ ಜೀವನಪೂರ್ತಿ ನಿರ್ವಹಣೆ, ಹಳೆಯ ಚಿನ್ನಕ್ಕೆ ಶೇ.100 ರಷ್ಟು ಮೌಲ್ಯ, ಶೇ.100 ಅನುಸರಣೆಯ ಚಿನ್ನ ಶುದ್ಧತೆಯ ಪ್ರಮಾಣಿಕರಣ, ಐಜಿಐ ಮತ್ತು ಜಿಐಎ ಪ್ರಮಾಣೀಕರಣ ಸೇರಿದಂತೆ 28 ಪಾಯಿಂಟ್‍ಗಳ ಗುಣಮಟ್ಟ ಪರೀಕ್ಷೆ, ಬೈಬ್ಯಾಕ್ ಗ್ಯಾರಂಟಿ, ಜವಾಬ್ದಾರಿಯುತ ಮೂಲ ಮತ್ತು ನ್ಯಾಯಯುತ ಕಾರ್ಮಿಕ ಪದ್ಧತಿಗಳು ಸೇರಿವೆ. ಮಲಬಾರ್ ನ್ಯಾಯಯುತ ದರ ಭರವಸೆಯು ಶೇ.4.9 ರಿಂದ ಆರಂಭವಾಗಲಿದ್ದು, ಇದು ಅತ್ಯಂತ ಕಡಿಮೆ ಆಭರಣಗಳ ಮೇಕಿಂಗ್ ಚಾರ್ಜ್ ಆಗಿದೆ.

11 ದೇಶಗಳಲ್ಲಿ 320ಕ್ಕೂ ಹೆಚ್ಚು ಶೋರೂಂಗಳೊಂದಿಗೆ ಜಾಗತಿಕ ಆಭರಣ ಬ್ರ್ಯಾಂಡ್ ಎನಿಸಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಜಾಗತಿಕವಾಗಿ ಹೊಸ ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿದೆ. ಅಲ್ಲದೇ, ಅದರ ಮಹತ್ವಾಕಾಂಕ್ಷೆಯ ರೀಟೇಲ್ ವಿಸ್ತರಣೆ ಯೋಜನೆಯೊಂದಿಗೆ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುತ್ತಿದೆ. ಜೆಮ್ಸ್ ಮತ್ತು ಜ್ಯುವೆಲ್ಲರಿ ಉದ್ಯಮದಲ್ಲಿ ಬ್ರ್ಯಾಂಡ್ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ. ಜೆಮ್ & ಜ್ಯುವೆಲ್ಲರಿ ಎಕ್ಸ್ಪೋರ್ಟ್ ಪ್ರಮೋಶನ್ ಕೌನ್ಸಿಲ್ 2021 ರಲ್ಲಿ ಆಯೋಜಿಸಿದ್ದ 48ನೇ ಇಂಡಿಯಾ ಜೆಮ್ & ಜ್ಯುವೆಲ್ಲರಿ ಅವಾಡ್ರ್ಸ್ ನಲ್ಲಿ ಕಂಪನಿ ರೋಲ್ಸ್ & ದಿ ಗ್ಲೋಬಲ್ ರೀಟೇಲರ್ ಆಫ್ ದಿ ಇಯರ್ ಪ್ರಶಸ್ತಿ ದೊರೆತಿದೆ.

ಗ್ರೂಪ್‍ನ ಸಿಎಸ್‍ಆರ್ ಭಾಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಈ ಸ್ಟೋರ್‍ನ ಲಾಭಾಂಶದಲ್ಲಿ ಶೇ.5 ರಷ್ಟನ್ನು ಚಾರಿಟೇಬಲ್ ಮತ್ತು ಜನೋಪಕಾರಿ ಚಟುವಟಿಕೆಗಳಿಗೆ ಕೊಡುಗೆ ನೀಡಲಿದೆ.

Share This Article
Leave a Comment

Leave a Reply

Your email address will not be published. Required fields are marked *