ಮಹೇಂದ್ರ ಸಿಂಗ್ ಧೋನಿ ಸಖತ್ ಪ್ರಾಣಿ ಪ್ರಿಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರಿಗೆ ಮತ್ತೊಬ್ಬರು ತುಂಬಾ ಕ್ಲೋಸ್ ಇದ್ದಾರೆ ಅನ್ನೋದನ್ನ ಪತ್ನಿ ಸಾಕ್ಷಿ ಅವರು ಸಾಕ್ಷಿ ಸಮೇತ ಹಾಕಿದ್ದಾರೆ.
https://www.instagram.com/p/CWYB1EZKJmI/?utm_medium=copy_link
ಹೌದು ಎಂ ಎಸ್ ಧೋನಿಗೆ ಅವರ ಮನೆಯಲ್ಲಿರುವ ಗಿಣಿ ತುಂಬಾ ಆತ್ಮೀಯವಾಗಿದೆ. ಧೋನಿ ಅವರು ಟೀ ಕುಡಿಯುವಾಗ ಗಿಣಿ ಮರಿಯೇ ಕಂಪನಿ ಕೊಡುತ್ತಂತೆ. ಆ ಬಗ್ಗೆ ಅವರ ಪತ್ನಿ ಸಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡು ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಾಕ್ಷಿ ಹಂಚಿಕೊಂಡಿರುವ ಫೋಟೋದಲ್ಲಿ ಮಿಸ್ಟರ್ ಕೂಲ್ ತುಂಬಾ ಇನೋಸೆಂಟ್ ಥರ ಕಾಣ್ತಾ ಇದ್ದಾರೆ. ಕೂಲ್ ಕ್ಯಾಪ್ಟನ್ ಜೊತೆ ಅಷ್ಟೇ ಕೂಲ್ ಆಗಿ ಗಿಣಿ ಮರಿಯೂ ಹೆಗಲ ಮೇಲೆ ಕುಳಿತಿದೆ.
ಫೋಟೋಗೊಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ ಸಾಕ್ಷಿ ಸಿಂಗ್. ಮಹಿ ಆ್ಯಂಡ್ ಈಸ್ ಹನಿ ಎಂದು ಬರೆದು ಚಾಯ್ ಡೆಡ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಕೂಲ್ ಕ್ಯಾಪ್ಟನ್ ಹೊಸ ಲುಕ್ಕಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಸದ್ಯ T20 ವಿಶ್ವಕಪ್ ಮುಗಿಸಿ ವಾಪಾಸ್ ಆಗಿರುವ ಧೋನಿ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಮುಂದಿನ ಐಪಿಎಲ್ ಗೆ ಸಜ್ಜಾಗುತ್ತಿದ್ದು, ಸದ್ಯಕ್ಕೆ ಕುಟುಂಬದಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ.