ಬೆಂಗಳೂರು : ಮಹಾತ್ಮ ಗಾಂಧಿಜೀ ಬರೀ ಭಾರತಕ್ಕೆ ನಾಯಕ ಅಲ್ಲ, ವಿಶ್ವದ ನಾಯಕ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುವ ಮೊದಲು ಭಾರತವನ್ನ ಸುತ್ತಿದ್ರು. ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನ ಬಗ್ಗೆ ತಿಳಿಯಲು ದೇಶ ಸುತ್ತಿದ್ರು.
ನನ್ನ ಜನ ಬಡತನದಲ್ಲಿ ಇದ್ದಾರೆ ಹೀಗಾಗಿ ಅವರಿಗೆ ಊಟ ಬಟ್ಟೆ ಸಿಗುವವರೆಗೂ ನಾನು ಅರೆಬಟ್ಟೆ ಧರಿಸುತ್ತೇನೆಂದು ತೀರ್ಮಾನ ಮಾಡಿದ್ರು.
ನುಡಿದಂತೆ ನಡೆದ ಮಹಾನುಭಾವ ಮಹಾತ್ಮ ಗಾಂಧಿಜೀ ಅವರು ಏನು ಹೇಳಿದ್ರೋ ಅದರಂತೆ ನಡೆದುಕೊಂಡ್ರು. ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ,ಓಬಮಾ ಸಹ ಮಹಾತ್ಮ ಗಾಂಧಿ ತತ್ವಗಳ ಮೇಲೆ ನಡೆದರು. ಮೋದಿ ಬರೀ ಸುಳ್ಳು ಹೇಳ್ತಾರೆ ಅವರು ಏನು ಹೇಳಿದ್ರು ನಾವು ಉಲ್ಟಾ ಅರ್ಥ ಮಾಡಿಕೊಳ್ಳಬೇಕು.
ಅದಾನಿ ಅಂಬಾನಿ ಆಸ್ತಿ ದುಪ್ಪಟ್ಟು ಆಗಿದೆ. ಗಾಂಧಿ ಕೊಂದವನನ್ನ ದೇಶಭಕ್ತ ಎಂದು ಕರೆಯುತ್ತಾರೆ ಇವರಿಗೆ ನಾಚಿಕೆ ಆಗಬೇಕು.
ಎಮರ್ಜೆನ್ಸಿ ಘೋಷಣೆ ಮಾಡಿಲ್ಲ, ಆದ್ರೆ ಜಾರಿಯಲ್ಲಿದೆ.ದೇಶದಲ್ಲಿ ಪ್ರಜಾಪ್ರಭುತ್ವ ನಾಶ ಆಗ್ತಿದೆ. ಸಂವಿಧಾನಕ್ಕೆ ಗೌರವ ಇಲ್ಲದಂತೆ ಆಗಿದೆ.ಹತ್ತು ತಿಂಗಳಿಂದ ರೈತರು ಹೋರಾಟ ಮಾಡ್ತಿದ್ದಾರೆ.ಮೋದಿ ದೇಶದಲ್ಲಿ ಏನು ಆಗಿಲ್ಲ ಅನ್ನೋ ರೀತಿ ನಡೆದುಕೊಳ್ಳುತ್ತಿದ್ದಾರೆ. ರೈತರ ಹೋರಾಟ ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಎಂದು ಸಿಎಂ ಕರೆದಿದ್ದಾರೆ. ಇವರಿಗೆ ಏನೆಂದು ಹೇಳಬೇಕು. ಮೋದಿ ಉಳಿಯಲು ಬಿಟ್ರೆ ನಮಗೆ ಬಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣ ಆಗುತ್ತೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.