in ,

ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದ ಮಹಾಶಿವರಾತ್ರಿ ಮಹೋತ್ಸವ…!

suddione whatsapp group join

 

ಚಿತ್ರದುರ್ಗ : ಆರ್ಯವೈಶ್ಯ ಸಂಘ, ಹಳವುದರ ಸ್ವಂತಾಲ್ ಪರಿವಾರ ಸಮಿತಿ, ಚಿತ್ರದುರ್ಗ ಇವರ ವತಿಯಿಂದ ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.

ಮಹಾಶಿವರಾತ್ರಿ ಮಹೋತ್ಸವವನ್ನು ಉದ್ಘಾಟಿಸಿ, ನಗರದ ಹಿರಿಯ ಸಮಾಜಬಂಧು ಹಾಗೂ ಆರ್ಯವೈಶ್ಯ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗಭೂಷಣ ಶ್ರೇಷ್ಠಿಯವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಶತಮಾನ ದಾಟಿ ಮುನ್ನೆಡೆಯುತ್ತಿರುವ ಆರ್ಯವೈಶ್ಯ ಸಂಘ ನಡೆದು ಬಂದ ದಾರಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರು ಮಹತ್ತರ ಕಾರ್ಯಕ್ರಮಗಳ ಬಗ್ಗೆ ಅವರ ಸವಿನೆನಪುಗಳನ್ನು ಹಂಚಿಕೊಂಡರು.

ಹಳವುದರ ಪರಿವಾರದ ಕಾರ್ಯದರ್ಶಿ ಡಾ|| ಹೆಚ್.ಎನ್. ರಾಮಮೂರ್ತಿ ಮಾತನಾಡಿ ಪ್ರಾಸ್ಥಾವಿಕ ನುಡಿಯ ಮೂಲಕ ಕಳೆದ 5 ವರ್ಷಗಳಿಂದ ಆಚರಿಸಲ್ಪಡುತ್ತಿರುವ ಈ ಹಬ್ಬದ ವಿಶೇಷಗಳನ್ನು ವಿವರಿಸಿದರು.

ಈ ಬಾರಿ ಇಷಾ ಫೌಂಡೇಷನ್‍ನಲ್ಲಿ ಸ್ಥಾಪಿಸಿರುವ ಆದಿ ಶಂಕರನ ಮಾದರಿ ತಯಾರಿಸಿ, ಭಕ್ತ ಜನರಿಗೆ ದರ್ಶನ ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸಬಾಬುರವರು ಮಾತನಾಡಿ ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯವು ನಮ್ಮೆಲ್ಲರ ಧಾರ್ಮಿಕ ಶಕ್ತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅನೇಕ ವೈಚಾರಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಿತ್ತಿದ್ದು, ಈ ವರ್ಷ ಆಹೋರಾತ್ರಿ ಭಜನೆ ಹಾಗೂ ಪೂಜಾ ಕೈಂಕರ್ಯ ನಡೆಸುತ್ತಿರುವುದು ನಮ್ಮ ಸಂಪ್ರದಾಯದ ಹಾದಿ ಎಂದು ತಿಳಿಸಿದರು.

ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ್‍ರವರು ಮಾತನಾಡುತ್ತ ನಮ್ಮಲ್ಲಿನ ಕಾರ್ಯಕ್ರಮಗಳು ರಾಜ್ಯ ಮಟ್ಟದಲ್ಲಿನ ಹೆಸರಾಗಿದೆ.  ಅದಕ್ಕೆ ಎಲ್ಲ ಜನರ, ತನು, ಮನ, ಧನದ ಸೇವಾತತ್ಪರತೆ ಮೂಲಕಾರಣವಾಗಿದೆ.

ಹಳವುದರ ಪರಿವಾರ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್. ಸತ್ಯನಾರಾಯಣ ಶೆಟ್ಟಿ ವಹಿಸಿದ್ದರು.  ಆರಂಭದಲ್ಲಿ ಕು|| ಪ್ರಣತಿ ಇವರಿಂದ ಪ್ರಾರ್ಥನೆ, ನಂತರ ಹೆಚ್.ಸಿ. ಕಾಂತರಾಜ್ ಇವರಿಂದ ಸ್ವಾಗತಿಸಿದರು. ನಯನ ಅನಿಲ್‍ರವರು ವಂದನೆ ಸಲ್ಲಿಸಿದರು. ಜಲಜಾರಾಣಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ವಾಸವಿ ಭಜನಾ ಮಂಡಳಿ, ಜೈವಾಸವಿ ಮಿತ್ರವೃಂದ, ಆಯಿತೋಳ್ ವಿರುಪಾಕ್ಷಪ್ಪ ತಂಡದವರಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಭಕ್ತಮಹಾಶಯರು ಪಾಲ್ಗೊಂಡರು.  ಸರ್ವಾಲಂಕೃತ ನಗರೇಶ್ವರನ ದರ್ಶನ ಹಾಗೂ ಪೂಜಾ ಮತ್ತು ಅಭಿಷೇಕ ವಿಧಿಗಳಲ್ಲಿ ಪಾಲ್ಗೊಂಡರು.  ಎತ್ತರದ ಇಶಾ ಪ್ರತಿಮೆಯ ದರ್ಶನದಿಂದ ಪುನೀತರಾದರು.

ಮಾಹಿತಿ ಮತ್ತು ಫೋಟೋ ಕೃಪೆ

ಪ್ರೊ. ಟಿ.ವಿ. ಸುರೇಶಗುಪ್ತ
ಸಾರ್ವಜನಿಕ ಸಂಪರ್ಕಾಧಿಕಾರಿ,
ಆರ್ಯವೈಶ್ಯ ಸಂಘ, ಚಿತ್ರದುರ್ಗ
ಮೊ : 9945461834

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಪುಲ್ವಾಮ ದಾಳಿಯಲ್ಲಿ ಮಡಿದವರಿಗೆ ಗೌರವಾಂಜಲಿಗಳು

ಕಾಂಗ್ರೆಸ್ ಏಕಾಂಗಿಯಾಗಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ : ಕಾಂಗ್ರೆಸ್ ನಾಯಕ ಈ ರೀತಿ ಯಾಕ್ ಹೇಳಿದ್ರು..?