
ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ರಾತ್ರಿಯಿಡಿ ಶಿವನನ್ನು ಧ್ಯಾನಿಸುವ ಮಹಾಶಿವರಾತ್ರಿಯ ಅಂಗವಾಗಿ ಶನಿವಾರ ರಾತ್ರಿ ನಗರದ ದೇವಾಲಯಗಳಲ್ಲಿ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಕೆಳಗೋಟೆಯಲ್ಲಿರುವ ಬೇಡರಕಣ್ಣಪ್ಪ ದೇವಸ್ಥಾನದಲ್ಲಿ ಬೃಹಧಾಕಾರವಾದ ಹಾರಗಳಿಂದ ಸಿಂಗರಿಸಿ ಪೂಜಿಸಲಾಯಿತು.
ಮುನ್ಸಿಪಲ್ ಕಾಲೋನಿಯಲ್ಲಿರುವ ಗಣೇಶ ದೇವಸ್ಥಾನದಲ್ಲಿನ ಕಂಠೇಶ್ವರ, ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿನ ಈಶ್ವರ, ಆನೆಬಾಗಿಲು ಸಮೀಪವಿರುವ ಪಾತಾಳೇಶ್ವರ ದೇವಸ್ಥಾನದಲ್ಲಿ ಶಿವನನ್ನು ಅಲಂಕರಿಸಿ ಶ್ರದ್ದಾಭಕ್ತಿಯಿಂದ ರಾತ್ರಿಯಿಡಿ ಪೂಜಿಸಲಾಯಿತು. ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಈಶ್ವರನ ದರ್ಶನ ಪಡೆದರು. ಸ್ಟೇಡಿಯಂ ರಸ್ತೆಯಲ್ಲಿರುವ ಜಿ.ಜಿ.ಸಮುದಾಯ ಭವನದ ಆವರಣದಲ್ಲಿ ಲಿಂಗ ಹಾಗೂ ಶಿವನನ್ನು ಅಲಂಕರಿಸಿ ಪೂಜಿಸಲಾಯಿತು.
ಅಲ್ಲಲ್ಲಿ ಭಕ್ತರಿಗೆ ಹಣ್ಣ ಹಂಪಲು ಹಾಗೂ ಬಿಸ್ಕತ್‍ಗಳನ್ನು ವಿತರಿಸಲಾಯಿತು.

GIPHY App Key not set. Please check settings