ಕರ್ನಾಟಕ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿಗೆ ಪರ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಮಹಾರಾಷ್ಟ್ರದಲ್ಲೂ ಟಿಪ್ಪು ಹೆಸರಿನಲ್ಲಿದ್ದ ಉದ್ಯಾವನದ ಹೆಸರು ಬದಲಾವಣೆ ಮಾಡಿದ್ದಾರೆ. ಮಹಾರಾಷ್ಟ್ರದ ಏಕನಾಥ್ ಶಿಂಧೆ – ದೇವೇಂದ್ರ ಫಡ್ನವಿಸ್ ಸರ್ಕಾರವೂ ಮುಂಬೈನ ಉಪನಗರದಲ್ಲಿ ಮಲಾಡ್ ನಲ್ಲಿರುವ ಉದ್ಯಾನವನಕ್ಕೆ ಟಿಪ್ಪು ಎಂದು ಹೆಸರಿಡಲಾಗಿತ್ತು.
ಈ ಹಿಂದೆ ಉದ್ಧವದ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರವಿದ್ದಾಗ ಉದ್ಯಾನವನಕ್ಕೆ ಟಿಪ್ಪು ಸುಲ್ತಾನ್ ಎಂದು ಹೆಸರಿಡಲಾಗಿತ್ತು. ಇದೀಗ ಆ ಹೆಸರನ್ನು ತೆಗೆಯಲು ಮುಂಬೈ ಉಪನಗರದ ಉಸ್ತುವಾರಿ ಸಚಿವ ಮಂಗಲ್ ಪ್ರಭಾತ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಡಿಪಿಡಿಸಿ ಸಭೆಯಲ್ಲಿ ಹಿಂದೂ ಸಮಾಜದ ಪ್ರತಿಭಟನೆ ಮತ್ತು ಮುಂಬೈ ಉತ್ತರ ಸಂಸದ ಗೋಪಾಲ್ ಶೆಟ್ಟಿ ಅವರ ಬೇಡಿಕೆ ಪರಿಗಣಿಸಿ, ಟಿಪ್ಪು ಸುಲ್ತಾನ್ ಹೆಸರು ಬದಲಾವಣೆಗೆ ನಿರ್ಧಾರ ಮಾಡಿದ್ದಾರೆ.
ಕೆಲವರು ಟಿಪ್ಪು ಸುಲ್ತಾನ್ ಉದ್ಯಾನವನ ಎಂದು ಬ್ಯಾನರ್ ಹಾಕಿದ್ದರು. ಆದರೆ ಸ್ಥಳೀಯರು ಅದನ್ನು ವಿರೋಧಿಸಿದ್ದರು. ಇದಕ್ಕೆ ಮೊದಲು ಔಪಚಾರಿಕವಾಗಿ ಹೆಸರಿಡಲಾಗಿಲ್ಲ. ಆದ್ದರಿಂದ ಅಗತ್ಯವನ್ನು ಮಾಡಿ ಅಕ್ರಮ ಬ್ಯಾನರ್ ಅನ್ನು ತೆಗೆದುಹಾಕಲು ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪಾರ್ಕ್‌ಗೆ ಹೆಸರಿಡಬೇಕಾದರೆ ನಾವು ಸೂಕ್ತ ಕ್ರಮವನ್ನು ಅನುಸರಿಸುತ್ತೇವೆ. ಟಿಪ್ಪು ಸುಲ್ತಾನ್ ಹೆಸರನ್ನು ಉದ್ಯಾನವನಕ್ಕೆ ಇಡಲು ಯಾರೂ ಬಯಸುವುದಿಲ್ಲ ಎಂದಿದ್ದಾರೆ.