ಮುಂಬೈ: ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶಿವಸೇನೆಯನ್ನು ಹಿಂದುತ್ವದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ‘ಕೆಲವರು ಬಾಳಾಸಾಹೇಬರ ಶಿವಸೇನೆ ಅಲ್ಲ ಎನ್ನುತ್ತಾರೆ, ಬಾಳಾಸಾಹೇಬರ ಚಿಂತನೆ ಏನಿತ್ತು ಎನ್ನುವುದನ್ನು ಅವರೇ ಹೇಳಬೇಕು. ಅವರ ಕಾಲದಲ್ಲಿ ಇದೇ ಶಿವಸೇನೆ, ಹಿಂದುತ್ವವೇ ನಮ್ಮ ಜೀವ’ ಎಂದು ಮುಖ್ಯಮಂತ್ರಿ ಹೇಳಿದರು.
ಏಕನಾಥ್ ಶಿಂಧೆ ಅವರೊಂದಿಗೆ ತೆರಳಿರುವ ಶಾಸಕರಿಂದ ಕರೆಗಳು ಬರುತ್ತಿವೆ ಎಂದು ಠಾಕ್ರೆ ಹೇಳಿದರು. ಬಲವಂತವಾಗಿ ಕರೆದೊಯ್ದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಠಾಕ್ರೆ ಅವರು ಬಂಡಾಯ ಶಾಸಕರಿಗೆ ಭಾವನಾತ್ಮಕ ಮನವಿ ಮಾಡಿದರು, ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಸಿದ್ಧನಿದ್ದೇನೆ ಎಂದು ಹೇಳಿದರು. “ನೀವು (ಶಾಸಕರು) ಹೇಳಿದರೆ ನಾನು ಸಿಎಂ ಸ್ಥಾನ ಬಿಡಲು ಸಿದ್ಧ, ಇದು ಸಂಖ್ಯಾಬಲದ ವಿಷಯವಲ್ಲ. ಒಬ್ಬ ವ್ಯಕ್ತಿ ಅಥವಾ ಶಾಸಕ ನನ್ನ ವಿರುದ್ಧವಾಗಿದ್ದರೆ ನಾನು ಬಿಡುತ್ತೇನೆ, ಒಬ್ಬನೇ ಒಬ್ಬ ಶಾಸಕನಾದರೂ ವಿರೋಧಿಸಿದರೆ ಅದು ನನಗೆ ತುಂಬಾ ಅವಮಾನಕರವಾಗಿದೆ ಎಂದು ಠಾಕ್ರೆ ಹೇಳಿದರು.
“ಶರದ್ ಪವಾರ್ ಮತ್ತು ಕಮಲ್ ನಾಥ್ ಅವರು ನನಗೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಅವರು ಫೋನ್ ಮಾಡಿದ್ದಾರೆ”. ರಾಜೀನಾಮೆ ನೀಡಲು ಮುಂದಾದಾಗ, “ಅವರಿಗೆ (ಬಂಡಾಯ ಶಾಸಕರು) ನನ್ನ ವಿರುದ್ಧ ಏನಾದರೂ ಇದ್ದರೆ, ಸೂರತ್‌ನಲ್ಲಿ ಇದನ್ನೆಲ್ಲ ಹೇಳುವ ಅವಶ್ಯಕತೆ ಏನಿತ್ತು? ಅವರು ಇಲ್ಲಿಗೆ ಬಂದು ನನ್ನ ಮುಂದೆಯೇ ಈ ರೀತಿ ಹೇಳಬಹುದಿತ್ತು”. ನನ್ನ ಯಾವುದೇ ಶಾಸಕರು ನಾನು ಸಿಎಂ ಆಗಿ ಮುಂದುವರಿಯಬಾರದು ಎಂದು ಬಯಸಿದರೆ, ಮಹಾರಾಷ್ಟ್ರ ಸಿಎಂ ಅಧಿಕೃತ ನಿವಾಸ ಹೋಗಲು ನಾನು ಸಿದ್ಧ ಎಂದಿದ್ದಾರೆ.
ಸಿಎಂ ಹುದ್ದೆಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ನಿಜವಾದ ಆಸ್ತಿ ಜನರ ಪ್ರೀತಿ. ಕಳೆದ ಎರಡು ವರ್ಷಗಳಲ್ಲಿ, ನಾನು ಜನರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುವ ಅದೃಷ್ಟವನ್ನು ಹೊಂದಿದ್ದೇನೆ ಎಂದು ಅವರು ಭಾವನಾತ್ಮಕವಾಗಿ ಹೇಳಿದರು.