ಮಹಾರಾಷ್ಟ್ರ: ಕೊರೊನಾ ಮೂರನೆ ಅಲೆಯ ಆತಂಕ ಎಲ್ಲರನ್ನು ಕಾಡುತ್ತಿದೆ. ಜೊತೆಗೆ ಎಲ್ಲೆಡೆ ಓಮಿಕ್ರಾನ್ ಭೀತಿಯೂ ಇದೆ. ಎಲ್ಲಿ ಮತ್ತೆ ಲಾಕ್ಡೌನ್ ಆಗುತ್ತೋ ಮತ್ತೆಲ್ಲಿ ಜೀವನ ಕಷ್ಟ ಆಗುತ್ತೋ ಅನ್ನೋ ಭಯ ಕೂಡ ಇದೆ.
ಇದೀಗ ಮತ್ತಷ್ಟು ಆತಂಕ ಸೃಷ್ಟಿಯಾಗುವಂತ ಮಾಹಿತಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸಚಿವರು, ಶಾಸಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ರಾಜ್ಯದ 10 ಸಚಿವರಿಗೆ, 20 ಶಾಸಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ. ಜೊತೆಗೆ ಸೋಂಕು ಹೆಚ್ಚಳದ ಹಿನ್ನೆಲೆ ಅಧಿವೇಶನದವನ್ನು ಮೊಟಕುಗೊಳಿಸಿದ್ದು, ಹೊಸ ವರ್ಷ ಹಾಗೂ ಬರ್ತ್ ಡೇ ಗಳನ್ನ ಮತ್ತೊಂದು ದಿನ ಆಚರಿಸಿಕೊಳ್ಳುವಂತೆ ತಿಳಿಸಿದ್ದೇವೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ 12 ದಿನಗಳ ಅಂತರದಲ್ಲಿ ಕೊರೊನಾ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಇದೀಗ ರಾಜ್ಯದ ಬಗ್ಗೆ ಗಮನ ಕೊಡಬೇಕಾದವರೇ ಸೋಂಕಿಗೆ ತುತ್ತಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.