ಬೆಂಗಳೂರು: ರಾಜಕಾರಣಿಗಳ ನಡುವಿನ ಮಾತುಕತೆಯಲ್ಲಿ ಸೈಲೆಂಟ್ ಆಗಿ ಕೊಡುವ ಪಂಚ್ ಗಳು ಕಡಿಮೆ ಏನು ಇರುವುದಿಲ್ಲ. ಕೆಲವೊಮ್ಮೆ ನೇರವಾಗಿ ಹೇಳದೆ ಇರುವ ಮಾತನ್ನ ಸೈಲೆಂಟ್ ಆಗಿನೆ ಕೊಡುತ್ತಾರೆ. ಅದಕ್ಕೆ ಉದಾಹರಣೆ ಡಿಕೆ ಶಿವಕುಮಾರ್. ಹೌದು ಹೆಚ್.ಸಿ.ಮಹದೇವಪ್ಪ ಅವರ ಮಾತಿಗೆ ಈಗ ಸೈಲೆಂಟ್ ಆಗಿನೇ ಪಂಚ್ ಕೊಟ್ಟಿದ್ದಾರೆ ಡಿಕೆ ಶಿವಕುಮಾರ್.
ನಾಯಕತ್ವದ ಚರ್ಚೆಯನ್ನ ನಾಯಿಗಳಿಗೆ ಹೋಲಿಕೆ ಮಾಡಿದ್ದ ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ನಾನು ಮಹದೇವಪ್ಪ ಅಥವಾ ಬೇರೆಯವರ ಹೇಳಿಕೆಗೆ ಉತ್ತರ ಕೊಡಲು ತಯಾರಿಲ್ಲ. ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯ ಅವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ. ಈ ತೀರ್ಮಾನ ಏನು ಎಂಬುದು ಸಮಯ ಬಂದಾಗ ತಿಳಿಯುತ್ತದೆ. ಇದು ಕದ್ದು ಮುಚ್ಚಿ ಮಾಡಿಕೊಂಡಿರುವ ಗುಟ್ಟು, ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನಕ್ಕೆ ಸಂದೇಶವನ್ನು ನೀಡುತ್ತಾರೆ ಎಂದಿದ್ದಾರೆ.
ಇನ್ನು ಹೆಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ ಡಿಕೆ ಸುರೇಶ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮಹದೇವಪ್ಪ ಅವರು ಯಾವುದೆರ ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದೃ ಕಟ್ಡಾ ಕಾಂಗ್ರೆಸ್ದಿಗರು ಯಾರೂ ಬೀದಿ ನಾಯಿಗಳಲ್ಲ. ಬೀದಿ ನಾಯಿಗೆ ಊಟ ಹಾಕುವುದು ಯಾಕೆ..? ಅವು ನಮ್ಮನ್ನ ಕಾಯುತ್ತವೆ ಅಂತ. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ ಅಂತಾರೆ. ಹಲವಾರು ಸನ್ನಿವೇಶದಲ್ಲಿ ಆ ನಾಣ್ಣುಡಿಯನ್ನು ಕೇಳಿದ್ದೇವೆ. ಕಟ್ಟಾ ಕಾಂಗ್ರೆಸ್ಸಿಗರು ಯಾವತ್ತಿದ್ದರೂ ನಿಯತ್ತಿನ ನಾಯಿಗಳು. ಋಣ ತೀರುವ ವ್ಯಕ್ತಿತ್ವದ ನಾಯಿಗಳು, ಯಜಮಾನನ ಋಣ ತೀರಿಸುವ ನಾಯಿಗಳು ಎಂದು ತಿರುಗೇಟು ನೀಡಿದ್ದಾರೆ.




