ಚಾಮರಾಜನಗರ: ಧ್ರುವನಾರಾಯಣ್ ಬದುಕಿದ್ದಾಗ ನಂಜನಗೂಡು ಕ್ಷೇತ್ರದ ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. ಜೊತೆಗೆ ಈ ಬಾರಿ ಮಗನಿಗೂ ಟಿಕೆಟ್ ಬೇಕು ಅಂತಾನೇ ಕೇಳಿದ್ದರು. ಆದ್ರೆ ಎಲೆಕ್ಷನ್ ಗೂ ಮುನ್ನವೇ ಹೇಳದೆ ಕೇಳದೆ ಬಾರದೂರಿಗೆ ಹೊರಟೇ ಹೋದರೂ. ಅಂತ ವ್ಯಕ್ತಿಯನ್ನ ಕಳೆದುಕೊಂಡ ಕಾರ್ಯಕರ್ತರಿಗೆ ಇನ್ನಿಲ್ಲದ ನೋವು. ಹೀಗಾಗಿ ಅವರ ಆಸೆಯಂತೆ ಮಗನಿಗೆ ಟಿಕೆಟ್ ನೀಡಿ ಎಂದು ಪಕ್ಷದ ಬಳಿ, ಕ್ಷೇತ್ರ ಬಿಟ್ಟುಕೊಡಿ ಎಂದು ಹೆಚ್ ಸಿ ಮಹದೇವಪ್ಪ ಬಳಿ ಮನವಿ ಮಾಡಿದ್ದರು.

ಇದೀಗ ಕಾರ್ಯಕರ್ತರ ಆಸೆಯಂತೆ ಮಹದೇವಪ್ಪ ಅವರು ಕ್ಷೇತ್ರ ಬಿಟ್ಟುಕೊಡಲು ಒಪ್ಪಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನೀನು ಬೇರೆಯಲ್ಲ, ನನ್ನ ಮಗ ಬೇರೆಯಲ್ಲ. ನಿನ್ನ ಕುಟುಂಬಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ. ಇಂದು ಧ್ರುವನಾರಾಯಣ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಲ್ಲದೆ ಕ್ಷೇತ್ರ ಬಿಟ್ಟು ಕೊಡುವ ಬಗ್ಗೆಯೂ ಮಾತನಾಡಿದ್ದಾರೆ.

ಧ್ರುವನಾರಾಯಣ್ ಅವರ ಮಗ ದರ್ಶನ್ ಗೆ ನಾನು ಬೆಂಬಲ ನೀಡುತ್ತೇನೆ. ಹೀಗಾಗಿ ನಂಜನಗೂಡ ಕ್ಷೇತ್ರದಿಂದ ಹಿಂದೆ ಸರಿಯುತ್ತಿದ್ದೇನೆ. ಧ್ರುವನಾರಾಯಣ್ ಹಠಾತ್ ನಿಧನರಾದಾಗಲೇ ನಾನು ಈ ನಿರ್ಧಾರ ಮಾಡಿದ್ದೆ. ದರ್ಶನ್ ಗೆಲುವಿಗೆ ಓಡಾಡುತ್ತೇನೆ. ಈ ಸಂದರ್ಭದಲ್ಲಿ ನಾನು ನಂಜನಗೂಡು ಅಭ್ಯರ್ಥಿಯಾಗಲೂ ಬಯಸುವುದಿಲ್ಲ. ಇದನ್ನು ನನ್ನ ಮಗ ಸುನೀಲ್ ಬೋಸ್ ಹಾಗೂ ದರ್ಶನ್ ಧ್ರುವನಾರಾಯಣ್ ಮುಂದೆ ಬಹಿರಂಗ ಪಡಿಸುತ್ತಿದ್ದೇನೆ ಎಂದಿದ್ದಾರೆ.





GIPHY App Key not set. Please check settings