ಭೋಪಾಲ್: ಸಾವು ಎಂಬುದೇ ಹಾಗೇ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಬರುತ್ತೆ ಎಂಬುದೇ ಗೊತ್ತಿರುವುದಿಲ್ಲ. ಬಂದಾಗ ದೇವಸ್ಥಾನವೇ ಆಗಿರಲಿ, ಆಸ್ಪತ್ರೆಯೇ ಆಗಿರಲಿ ಉಳಿಸಲು ಆಗುವುದಿಲ್ಲ. ದೇವರು ಕೂಡ ಆಯಸ್ಸು ಮುಗಿದ ಮೇಲೆ ಸುಮ್ಮನೆ ಕೂತು ಬಿಡುತ್ತಾನೆ. ದೇವರಿಗೆ ನಮಿಸುವಾಗಲೇ ಅಲ್ಲೊಬ್ಬ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.
कटनी: साईं मंदिर में बाबा के चरणों में टेका मत्था
फिर सिर नहीं उठा पाया युवक… हार्ट अटैक से मौत#MadhyaPradesh #Katni @JournalistVipin pic.twitter.com/yCljXcl53j
— News24 (@news24tvchannel) December 3, 2022
ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಕಟ್ನಿಯಲ್ಲಿ. ಸಾಯಿ ಬಾಬಾನ ಭಕ್ತನೊಬ್ಬ ದೇವಸ್ಥಾನಕ್ಕೆ ತೆರಳಿದ್ದಾನೆ. ದೇವಾಲಯದಲ್ಲಿ ಭಕ್ತಿಯಿಂದ ಓಡಾಡಿದ್ದಾನೆ. ಆತನಿಗೆ ಇದು ಕೊನೆಯ ಕ್ಷಣ ಎಂಬ ಸಣ್ಣ ಸುಳಿವು ಇರಲಿಲ್ಲ. ಅಷ್ಟೇ ಭಕ್ತಿಯಿಂದ ಬಾಬಾ ಬಳಿ ಬಂದು ಬೇಡಿಕೊಳ್ಳಲು ಹೋಗಿದ್ದಾನೆ. ಆದ್ರೆ ನಮಿಸುತ್ತಿದ್ದಂತೆ ಕುಸಿದು ಬಿದ್ದ ವ್ಯಕ್ತಿ ಮತ್ತೆ ಎದ್ದೇಳಲೇ ಇಲ್ಲ.
ದೇವರಿಗೆ ನಮಸ್ಕರಿಸಿ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಅಲ್ಲಿಯೇ ಬೇರೆ ಭಕ್ತರು ಅದನ್ನು ನೋಡುತ್ತಾ ಸುಮ್ಮನೆ ನಿಂತಿದ್ದರು. ಆದ್ರೆ ಎಲ್ಲರಿಗೂ ಅನುಮಾನ ಬಂದ ಮೃತ ಭಕ್ತನ ಬಳಿ ಓಡಿ ಬಂದಿದ್ದಾರೆ. ಆತನನ್ನು ತಟ್ಟಿ ಎಬ್ಬಿಸಲು ಟ್ರೈ ಮಾಡಿದ್ದಾರೆ. ಆದರೂ ಆ ವ್ಯಕ್ತಿ ಎದ್ದಿಲ್ಲ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.