ತುಮಕೂರು: ಲಂಚ ಪ್ರಕರಣದಲ್ಲಿ ದೂಷಿಯಾಗಿರುವ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಡಾಳು ವಿರೂಪಾಕ್ಷಪ್ಪ ಅವರ ಜಾಮೀನು ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿತ್ತು. ಈ ಬೆನ್ನಲ್ಲೇ ಬಂಧನದ ಭೀತಿ ವಿರೂಪಾಕ್ಷಪ್ಪ ಅವರಿಗೆ ಎದುರಾಗಿತ್ತು. ಆದರೂ ಚನ್ನಗಿರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಯತ್ನಿಸಿದ್ದಾರೆ. ಈ ವೇಳೆ ತುಮಕೂರಿನ ಕ್ಯಾತ್ಸಂದ್ರದ ಬಳಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ ಅವರು ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದರು. ಅವರ ಪುತ್ರ ತಂದೆಯ ನಿಗಮದಲ್ಲಿ ಟೆಂಡರ್ ನೀಡಲು ಹಣ ಪಡೆಯುತ್ತಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು, ದಾಳಿ ನಡೆಸಿದಾಗ ಆರು ಕೋಟಿ ಹಣ ಸಿಕ್ಕಿತ್ತು. ಸದ್ಯ ಪ್ರಶಾಂತ್ ವಿರೂಪಾಕ್ಷಪ್ಪರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.
ಇದೇ ಕೇಸಲ್ಲಿ ಮಾಡಾಳು ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದರು. ಆದ್ರೆ ವಿಚಾರ ತಿಳಿದ ಬಳಿಕ ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದರು. ಬಳಿಕ ಜಾಮೀನು ಅರ್ಜಿಗೆ ಅಪ್ಲೈ ಮಾಡಿದ್ದರು. ಜಾಮೀನು ಸಿಕ್ಕ ಕೂಡಲೇ ಎಲ್ಲರ ಎದುರು ಮೆರವಣಿಗೆ ಮೂಲಕ ಬಂದಿದ್ದರು. ಇದೀಗ ಅದೇ ಕೇಸಲ್ಲಿ ಮತ್ತೆ ಅರೆಸ್ಟ್ ಆಗಿದ್ದಾರೆ.