ಚಿತ್ರದುರ್ಗ, (ಮಾ.07) : ತಾಲ್ಲೂಕಿನ ಮದಕರಿಪುರ ಗ್ರಾಮ ಪಂಚಾಯತಿ PDO ಅವರು ಶಾಲಾ ಶಿಕ್ಷಕರೋರ್ವರಿಂದ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಆರೋಪಿಯು ಚಳ್ಳಕೆರೆ ರಸ್ತೆಯ ಅಕ್ಷಯ ಗ್ಲೋಬಲ್ ಆಸ್ಪತ್ರೆ ಹಿಂಭಾಗದ ಶ್ರೀರಾಮ್ ಬಡಾವಣೆಯ ಪ್ರಾಥಮಿಕ ಶಾಲಾ ಶಿಕ್ಷಕರ ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಈ ಸಂಬಂಧವಾಗಿ ದೂರುದಾರರು ಎಸಿಬಿ ಠಾಣೆಗೆ ಹಾಜರಾಗಿ ನೀಡಿರುತ್ತಾರೆ. ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.
ಇಂದು (ಸೋಮವಾರ) ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ದೂರುದಾರರೊಂದಿಗೆ ಮದಕರಿಪುರ ಗ್ರಾಮ ಪಂಚಾಯಿತಿ ಕಛೇರಿಗೆ ಹಾಜರಾಗಿ ತನ್ನ ಬಾಕಿಯಿದ್ದ ಕೆಲಸದ ಬಗ್ಗೆ ಪಿ.ಡಿ.ಓ.ರವರನ್ನು ಭೇಟಿ ಮಾಡಿ ವಿಚಾರಿಸಿದ್ದು, ಪಿ.ಡಿ.ಓ. ಲಂಚದ ಹಣವನ್ನು ನೀಡುವಂತೆ ತಮ್ಮ ಕೈಸನ್ನೆಯಿಂದ ಸೂಚಿಸಿದ್ದು ಪಿ.ಡಿ.ಓ.ರವರು ಸೂಚಿಸಿದಂತೆ 2ನೇ ಅಪಾದಿತೆ ದೂರುದಾರರು ಲಂಚದ ಹಣವನ್ನು ಪಡೆದಿದ್ದು, ಆರೋಪಿತರನ್ನು ಟ್ರ್ಯಾಪ್ ಮಾಡಲಾಗಿದೆ.
ಆಪಾದಿತರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿರುತ್ತದೆ. ಅದೇ ವೇಳೆಯಲ್ಲಿ ಆಪಾದಿತರ ಮನೆಯ ಶೋಧನೆಯನ್ನು ಸಹ ಕೈಗೊಳ್ಳಲಾಯಿತು. ಶೋಧನಾ ಕಾರ್ಯವನ್ನು ಪಿ.ಐ. ಪ್ರವೀಣ್ ಕುಮಾರ್ ವಿ. ರವರ ತಂಡ ಕೈಗೊಂಡಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿದೆ.
ಆ ಸಂದರ್ಭದಲ್ಲಿ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ಪ್ರತಾಪ್‌ರೆಡ್ಡಿ., ಡಿ.ವೈ.ಎಸ್.ಪಿ, ಹಾಗೂ ಉಮೇಶ್ ಕುಮಾರ್ ಎಸ್.ಎಮ್., ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ಶ್ರೀ ಎ. ಮಾರುತಿರಾಂ, ಹೆಚ್.ಸಿ., ಶ್ರೀ ಜಿ.ಎಸ್, ಓಬಣ್ಣ, ಹೆಚ್.ಸಿ., ಶ್ರೀ ಹರೀಶ್‌ಕುಮಾರ್, ಹೆಚ್.ಸಿ. ಶ್ರೀ ಫಕೃದ್ದೀನ್, ಪಿ.ಸಿ., ಶ್ರೀ ಕೆ.ಬಿ. ಯತಿರಾಜ, ಪಿ.ಸಿ., ಶ್ರೀ ಎಮ್. ಫಯಾಜ್, ಪಿ.ಸಿ. ಇವರು ಹಾಜರಿದ್ದರು.