ಉಪಸಭಾಪತಿಯಾದ ಪ್ರಾಣೇಶ್ : ಉಪಸಭಾಪತಿ ಸ್ಥಾನಕ್ಕೆ ಬೆಲೆ ಸಿಗಲಿದೆ ಎಂದ ಸಿಎಂ ಬೊಮ್ಮಾಯಿ

suddionenews
1 Min Read

ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ನ ಉಪಸಭಾಪತಿಯಾಗಿ ಎಂ. ಕೆ ಪ್ರಾಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಪ್ರಾಣೇಶ್, ಜವಾಬ್ದಾರಿಯುತ ವ್ಯಕ್ತಿ, ಸಜ್ಜನ, ಪ್ರಗತಿಪರ ಚಿಂತನೆಯುಳ್ಳ ವ್ಯಕ್ತಿ. ಅವರಿಂದ ಉಪಸಭಾಪತಿ ಸ್ಥಾನಕ್ಕೆ ಬೆಲೆ ಸಿಗಲಿದೆ ಎಂದಿದ್ದಾರೆ.

ಪ್ರಾಣೇಶ್ ಅವರು ಸರ್ವ ಸದಸ್ಯರ ವಿಶ್ವಾಸವನ್ನು ಗಳಿಸುತ್ತಾರೆ. ಜನರ ಸಮಸ್ಯೆ ಏನೇ ಇರಲಿ, ಆ ಸಮಸ್ಯೆಯನ್ನು ಕೈಗೆತ್ತಿಕೊಂಡು ಪರಿಹಾರ ಪಡೆಯಿವ ಸಜ್ಜನಿಕೆಯುಳ್ಳ ವ್ಯಕ್ತಿ. ಬಹಳ ಸೌಮ್ಯ ಸ್ವಭಾವದವರು. ಅವರ ನಡ-ನುಡಿ ಎರಡು ಒಂದೇ. ಎಲ್ಲಾ ಪಕ್ಷ, ಪಂಗಡಗಳನ್ನು ಮೀರಿ ಅವರು ಸ್ನೇಹ ಸಂಬಂಧವನ್ನು ಬೆಳೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಪಾತ್ರವಹಿಸಿದ್ದರು.

ಇನ್ನು ಚಿಕ್ಕಮಗಳೂರು ಭಾಗದ ರೈತರು, ಕಾಡಂಚಿನ ಜನರು, ಬುಡಕಟ್ಟು ಜನಾಂಗದವರ ಸಮಸ್ಯೆ, ಕಾಫಿಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿ, ಒಂದು ದಶಕಕ್ಕು ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಕಳೆದ ಬಾರಿಯೂ ಉಪಸಭಾಪತಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಉತ್ತಮ ಸಭಾಪತಿಗಳು ಪರಿಷತ್ತಿಗೆ ದೊರೆತಿದ್ದು, ಕೆಲಸದ ಭಾರವನ್ನು ನಿಭಾಯಿಅಉವ ಶಕ್ತಿ, ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *