ಎಂ.ಜಯಣ್ಣ ಪ್ರಥಮ ವರ್ಷದ ಪುಣ್ಯಸ್ಮರಣೆ : ಮಾಜಿ ಸಚಿವ ಎಚ್.ಆಂಜನೇಯ ಭಾಗಿ

suddionenews
1 Min Read

 

ವರದಿ : ಮಾರುತಿ ನಾಯಕನಹಟ್ಟಿ

ಸುದ್ದಿಒನ್, ಚಿತ್ರದುರ್ಗ, (ನ.09) : ಸಾಮಾಜಿಕ ಹೋರಾಟಗಾರ ಎಂ.ಜಯಣ್ಣನವರ ಪ್ರಥಮ ವರ್ಷದ ಪುಣ್ಯಸ್ಮರಣೆಯನ್ನು ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್‍ನಲ್ಲಿರುವ ಎಂ.ಜಯಣ್ಣನವರ ನಿವಾಸದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯರವರು ಎಂ.ಜಯಣ್ಣನವರ ಭಾವಚಿತ್ರಕ್ಕೆ ಪುಷ್ಪಾಹಾರ ಹಾಕಿ ನಮನ ಸಲ್ಲಿಸಿದರು.

ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ನರಸಿಂಹರಾಜು, ಡಾ.ಬಿ.ಯೋಗೇಶ್ ಬಾಬು, ಲೋಹಿತ್ ಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ತಾಪಂ ಮಾಜಿ ಸದಸ್ಯರಾದ ಸಮರ್ಥರಾಯ, ಎಂ.ಜಯಣ್ಣ ಚಾರಿಟವಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ.ಪ್ರಸನ್ನ ಎಂ.ಜಯಣ್ಣ, ಕಾಂಗ್ರೆಸ್ ಪರಿಶಿಷ್ಟ ಜಾತಿ ಚಿತ್ರದುರ್ಗ ತಾಲೂಕು ಅಧ್ಯಕ್ಷ ಅನಿಲ್ ಕೋಟಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *