ಗಂಗಾ ವಿಲಾಸ್ ಹಡಗು ಪ್ರವಾಸವನ್ನು ಪ್ರಧಾನಿ ಮೋದಿ ಕಳೆದ ಮೂರು ದಿನಗಳ ಹಿಂದೆ ಉದ್ಘಾಟನೆ ಮಾಡಿದ್ದರು. ಭೂಲೋಕೆದ ಸ್ವರ್ಗವನ್ನು ಜಲಮಾರ್ಗದ ಮೂಲಕ ತೋರಿಸುವುದಕ್ಕೆ ಗಂಗಾ ವಿಲಾಸ್ ಯೋಜನೆ ಮಾಡಲಾಗಿತ್ತು. ಆದರೆ ಆರಂಭವಾದ ಮೂರೇ ದಿನಕ್ಕೆ ಕ್ರೂಸ್ ಸ್ಟ್ರಕ್ ಆಗಿದೆ ಎನ್ನಲಾಗುತ್ತಿದೆ.
ಭಾರತ ಮತ್ತು ಬಾಂಗ್ಲಾದೇಶದ ಸುಂದರ ತಾಣಗಳನ್ನು ತೋರಿಸವ ಯೋಜನೆ ಇದಾಗಿತ್ತು. ಅತಿ ಉದ್ಧದ ಕ್ರೂಸರ್ ಗಂಗಾ ವಿಲಾಸ್. 36 ಪ್ರಯಾಣಿಕರನ್ನು ಹೊತ್ತು, ಉತ್ತರ ಪ್ರದೇಶದ ವಾರಾಣಾಸಿಯಿಂದ ಪ್ರಯಾಣ ಆರಂಭಿಸಿತ್ತು. ಸುಮಾರು 3,200 ಕಿಲೋ ಮೀಟರ್ ಟಾರ್ಗೆಟ್ ಹೊಂದಿದ್ದ ಗಂಗಾ ವಿಲಾಸ ಈಗ ನಿಂತು ಬಿಟ್ಟಿದೆ.
ಪ್ರತಿಯೊಬ್ಬ ಪ್ರವಾಸಿಗನು ತಲಾ ಇಪ್ಪತ್ತು ಲಕ್ಷ ಹಣ ನೀಡಿ ಪ್ರಯಾಣ ಆರಂಭಿಸಿದ್ದರು. ಆದ್ರೆ ಈ ಬಗ್ಗೆ ಒಳನಾಡು ಜಲಮಾರ್ಗದ ಪ್ರಾಧಿಕಾರದ ಅಧ್ಯಕ್ಷ ಸಂಜಯ ಭೂಂಡೊಪಧ್ಯಾಯ ಸ್ಪಷ್ಟನೆ ನೀಡಿದ್ರು, ಗಂಗಾ ವಿಲಾಸ್ ಕ್ರೂಸ್ ಛಾಪ್ರಾ ಬಳಿ ಸ್ಟ್ರಕ್ ಆಗಿರುವ ಮಾಹಿತಿ ಸುಳ್ಳು. ನಿಗದಿತ ಸಮಯದಂತೆ ಗಂಗಾ ವಿಲಾಸ್ ಪಾಟ್ನಾವನ್ನು ತಲುಪಲಿದೆ. ನದಿಯ ದಡದ ಬಳಿ ನೀರಿನ ಮಟ್ಟ ಕಡಿಮೆ ಇದ್ದಿದ್ದರಿಂದ ಕ್ರೂಸ್ ಅನ್ನು ದಡಕ್ಕೆ ತೆಗೆದುಕೊಂಡು ಹೋಗದೆ ಜನರನ್ನು ಬೋಟ್ ಸಹಾಯದಿಂದ ಕರೆದುಕೊಂಡು ಹೋಗಿದ್ದಾರೆ ಅಷ್ಟೆ. ಅದನ್ನು ಹೊರತುಪಡಿಸಿ, ಈ ಮಾಹಿತಿ ಸುಳ್ಳು ಎಂದಿದ್ದಾರೆ.