ನವದೆಹಲಿ: ಕಳೆದ ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಗೃಹ ಬಳಕೆಯ ಎಲ್ಪಿಜಿ ಬಳಕೆದಾರರಿಗೆ ಮತ್ತೆ ಸಬ್ಸಿಡಿ ನೀಡುವ ಬಗ್ಗೆ ಹೇಳಿಕೆ ನೀಡಿತ್ತು. ಆದರೆ ಇದೀಗ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಅಧಿಕೃತವಾಗಿ ಹೇಳಿದೆ.
ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಈ ಬಗ್ಗೆ ಮಾತನಾಡಿ, ಸಾಮಾನ್ಯ ಗ್ರಾಹಕರು ಮಾರ್ಕೆಟ್ ದರಕ್ಕೇನೆ ಅಡುಗೆ ಅನಿಲವನ್ನು ಖರೀದಿ ಮಾಡಬೇಕಾಗುತ್ತದೆ. ಕೋವಿಡ್ ಆರಂಭವಾದಾಗಿನಿಂದ ಸಬ್ಸಿಡಿ ನೀಡಿಲ್ಲ. ಮುಂದೆಯೂ ನೀಡಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಯಾರು ಸಿಲಿಂಡರ್ ಹೊಂದಿರುತ್ತಾರೆಯೋ ಅಂತವರಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ ಎಂದಿದ್ದಾರೆ.
ಈ ಮುಂಚೆ ಪ್ರಧಾನಿ ಮೋದಿ ಸರ್ಕಾರ ಒಂದು ಗ್ಯಾಸ್ ಬುಕ್ಕಿಂಗ್ ಮೇಲೆ ಇಂತಿಷ್ಟು ಸಬ್ಸಿಡಿ ಅಂತ ನೇರ ಗ್ರಾಹಕರ ಬ್ಯಾಂಕ್ ಖಾತೆಗೆ ಹಣ ಹಾಕುತ್ತಿತ್ತು. ಆದರೆ ಕೊರೊನಾ ನಂತರ ಸಬ್ಸಿಡಿಯೂ ನಿಂತಿದೆ. ದರ ಏರಿಕೆ ಗಗನಕ್ಕೇರುತ್ತಿದೆ. ಸದ್ಯ 14 ಕೆಜಿ ಸಿಲಿಂಡರ್ ಬೆಲೆ 1006 ರೂಪಾಯಿ ಇದೆ.