LPG  ಸಿಲಿಂಡರ್ ಬೆಲೆ ಇಳಿಕೆ…!

ನವದೆಹಲಿ : ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ 25.5 ರೂಪಾಯಿ ಇಳಿಕೆಯಾಗಿದೆ. ಕಡಿಮೆಯಾದ ಹೊಸ ದರಗಳು ಇಂದಿನಿಂದ (ಶನಿವಾರ) ಜಾರಿಗೆ ಬರಲಿವೆ.

ಆದರೆ, ಮನೆಗಳಲ್ಲಿ ಬಳಸುವ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿಯಲ್ಲಿ 25.50 ರೂ,
ಕೋಲ್ಕತ್ತಾದಲ್ಲಿ 36.50 ರೂ,
ಮುಂಬೈನಲ್ಲಿ 35.50 ರೂ,
ಹೈದರಾಬಾದ್‌ನಲ್ಲಿ 36.50 ರೂ ಕಡಿತವಾಗಿದೆ.
ಬೆಂಗಳೂರಿನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್​ಗೆ ಪ್ರಸ್ತುತ 1685.5 ರೂ ಪಾವತಿಸಬೇಕು.

ಪೆಟ್ರೋಲಿಯಂ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಏಪ್ರಿಲ್ 1, 2017 ರಿಂದ ಜುಲೈ 6, 2022 ರ ನಡುವೆ 58 ಬಾರಿ   ಪರಿಷ್ಕರಣೆಯಾಗುವ ಮೂಲಕ LPG ಬೆಲೆಗಳು ಶೇಕಡಾ 45 ರಷ್ಟು ಏರಿಕೆಯಾಗಿದೆ.

ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2017ರ ಏಪ್ರಿಲ್‌ನಲ್ಲಿ 723 ರೂ.ಗೆ ಇತ್ತು ಮತ್ತು ಜುಲೈ 2022ರ ವೇಳೆಗೆ ಶೇ.45ರಷ್ಟು ಏರಿಕೆಯಾಗಿ 1,053 ರೂ. ಆಗಿದೆ.

ಅದೇ ಸಮಯದಲ್ಲಿ, ಜುಲೈ 1, 2021 ಮತ್ತು ಜುಲೈ 6, 2022 ರ ನಡುವಿನ 12 ತಿಂಗಳ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿನ ಈ ಹೆಚ್ಚಳವು ಶೇಕಡಾ 26 ರಷ್ಟಿತ್ತು.

ಜುಲೈ 2021 ರಲ್ಲಿ ಅದೇ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 834 ರೂ.ಗೆ ಇತ್ತು. ಜುಲೈ 2022 ರ ವೇಳೆಗೆ, ಇದರ ಬೆಲೆ ಶೇಕಡಾ 26 ರಷ್ಟು ಏರಿಕೆಯಾಗಿ 1,053 ಕ್ಕೆ ತಲುಪಿದೆ.

ಎಲ್ಪಿಜಿ ಸಿಲಿಂಡರ್ ಬೆಲೆಗಳು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಮತ್ತು ಸಾರಿಗೆ ಶುಲ್ಕಗಳನ್ನು ಅವಲಂಬಿಸಿರುವುದರಿಂದ ಪ್ರತಿ ರಾಜ್ಯದಲ್ಲಿಯೂ ಭಿನ್ನವಾಗಿರುತ್ತವೆ.

Share This Article
Leave a Comment

Leave a Reply

Your email address will not be published. Required fields are marked *