ಟ್ರೈನಿಂಗ್ ಸೆಂಟರ್ ನಲ್ಲಿ ಪ್ರೀತಿ.. ಹಣದ ವಿಚಾರಕ್ಕೆ ಪ್ರಿಯಕರನಿಂದ ಕೊಲೆ.. ದಾಂಡೇಲಿ ಟು ಉಡುಪಿ, ಟ್ರಾಜಿಕ್‌ ಲವ್ ಕಹಾನಿ..!

suddionenews
1 Min Read

ಬೆಂಗಳೂರು: ಹಣದ ವಿಚಾರಕ್ಕೆ ಶುರುವಾದ ಗಲಾಟೆ ಕಡೆಗೆ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ಗಂಗಾ ಕೊಲೆಯಾದ ಯುವತಿ.

ಶ್ಯಾಮ್ ಎಂಬಾತನೇ ಈ ಕೊಲೆ ಮಾಡಿರುವ ಯುವಕ. ಶ್ಯಾಮ್ ಮೂಲತಹ ದಾಂಡೇಲಿಯವನು. ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ. ಅದರಂತೆ ಇಲ್ಲಿಯೇ ಒಂದು ಯೋಗ ಸೆಂಟರ್ ಕೂಡ ಓಪನ್ ಮಾಡಿದ್ದ ಆ ಯೋಗ ಸೆಂಟರ್ ಗೆ ಬರ್ತಿದ್ದ ಹುಡುಗಿಯೇ ಗಂಗಾ.

ದಿನ ಕಳೆದನಮತೆ ಯೋಗ ಟ್ರೈನಿಂಗ್ ಜೊತೆಗೆ ಇಬ್ಬರ ನಡುವೆ ಪ್ರೀತಿಯೂ ಮೊಳಕೆಯೊಡೆದಿತ್ತು. ಮದುವೆಯಾಗುವ ನಿರ್ಧಾರಕ್ಕೂ ಬಂದು ನಿಂತಿದ್ದರು. ಆದ್ರೆ ಗಂಗಾಳಿಗೂ ಸ್ವಂತ ಏನಾದ್ರೂ ವ್ಯವಹಾರ ಮಾಡಬೇಕೆಂಬ ತುಡಿತ. ಅದರಂತೆ ಗಂಗಾ ಕೂಡ ಪ್ರತ್ಯೇಕವಾಗಿ ಒಂದು ಯೋಗ ಸೆಂಟರ್ ಓಪನ್ ಮಾಡ್ತಾಳೆ. ಅದಕ್ಕೆ ಶ್ಯಾಮ್ ಬಳಿ ಒಂದು ಲಕ್ಷ ಹಣ ತೆಗೆದುಕೊಂಡಿದ್ದಳಂತೆ.

ಈ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಆ ಜಗಳದಲ್ಲಿ ಶ್ಯಾಮ್, ಗಂಗಾಳ ತಲೆಯನ್ನ ಗೋಡೆಗೆ ಗುದ್ದಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬುಧವಾರ ಈ ಘಟನೆ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಶ್ಯಾಮ್ ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *