ಕಾರವಾರ: ಇಂದು ಬೆಳ್ಳಂ ಬೆಳ್ಳಗ್ಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ 9 ಜನರ ಪ್ರಾಣ ಹೋಗಿದೆ. ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟದಲ್ಲಿ ಈ ಅಪಘಾತ ನಡೆದಿದೆ.

ಈ ಆಕ್ಸಿಡೆಂಟ್ ಬಗ್ಗೆ ಉತ್ತರ ಕನ್ನಡ ಎಸ್ಪಿ ನಾರಾಯಣ್ ಎಂ ಮಾತನಾಡಿ, ಕುಮುಟದಲ್ಲಿ ಇವತ್ತು ಸಂತೆ ನಡೆಯುತ್ತದೆ. ಈ ಸಂತೆಗೆ ಹುಬ್ಬಳ್ಳಿ, ಹಾವೇರಿ, ಸವಣೂರಿನಿಂದ ತರಕಾರಿ, ಹಣ್ಣು ತಂದು ಮಾರಾಟ ಮಾಡುತ್ತಾರೆ. ಸಮನತೆಗೆ ಸುತ್ತ ಮುತ್ತಲಿನ ರೈತರು ಈ ವಾಡಿಕೆ ರೂಢಿ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಒಂದು ಲಾರಿಯಲ್ಲಿ 25 ಮಂದಿ ತರಕಾರಿ, ಹಣ್ಣುಗಳನ್ನು ಹೊತ್ತು ಮಾರಾಟ ಮಾಡಲು ಬರುತ್ತಿದ್ದರು. ಆದರೆ ಈ ಲಾರಿ ಬೆಳಗ್ಗೆ 6.15 ಸುಮಾರಿಗೆ ಅರಬೈಲ್ ಘಟ್ಟದಲ್ಲಿರುವ ಗುಳ್ಳಾಪುರದಲ್ಲಿ ಲಾರಿ ಅಪಘಾತಕ್ಕೆ ಒಳಗಾಗಿದೆ. ಘಟ್ಟದಲ್ಲಿ ತಡೆಗೋಡೆ ಇರಲಿಲ್ಲ.

ಡ್ರೈವರ್ ಲಾರಿಯನ್ನು ಲೆಫ್ಟ್ ಗೆ ಎಳೆಯುವುದಕ್ಕೆ ಪ್ರಯತ್ನಿಸಿದ್ದಾರೆ. ಆಗ ಲಾರಿ ಪಲ್ಟಿ ಹೊಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸ್ಥಳದಲ್ಲಿಯೇ ಎಂಟು ಜನ ಸಾವನ್ನಪ್ಪಿದ್ದಾರೆ. ಮಿಕ್ಕವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇಂದು ರಾಜ್ಯದಲ್ಲಿ ಎರಡು ಪ್ರತ್ಯೇಕ ಅಪಘಾತದಲ್ಲು ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈ ದುರಂತ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿರುವ ಸುದ್ದಿ ತಿಳಿದು ಸಂಕಟವಾಯಿತು.
ಮೃತರ ಆತ್ಮಗಳಿಗೆ ಚಿರಶಾಂತಿ ಕೋರುತ್ತೇನೆ. ಈ ದುರ್ಘಟನೆಗಳಲ್ಲಿ ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ನೊಂದ ಜನರಿಗೆ ನನ್ನ ಸಂತಾಪಗಳು. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದಿದ್ದಾರೆ.

ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಹಿ ಉತ್ತರ ಕನ್ನಡದಲ್ಲಿ 9 ಜನ ಸಾವು : ಸಿಎಂ ಸಂತಾಪ..!