ಹನುಮ ದೇವರೇ ಅಲ್ವಂತೆ.. ಅರೆರೆ ಏನಿದು ಆದಿಪುರುಷ್ ಮತ್ತೊಂದು ವಿವಾದ..?

1 Min Read

 

 

ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದ ಒಂದಲ್ಲ‌ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದೆ. ಸಿನಿಮಾದ ಗ್ರಾಫಿಕ್ಸ್, ರಾಮಯಾಣದ ಪಾತ್ರಗಳು ಹೀಗೆ ನೆಗೆಟಿವ್ ಕಮೆಂಟ್ಸ್ ಗಳನ್ನೇ ಪಡೆದುಕೊಂಡಿರುವ ಆದಿಪುರುಷ್ ತಂಡದಿಂದ ಇದೀಗ ಹನುಮನ ಬಗೆಗೊಂದು ವಿವಾದ ಹುಟ್ಟಿಕೊಂಡಿದೆ.

ಆದಿಪುರುಷ್ ಸಿನಿಮಾದ ಗೀತ ರಚನೆಕಾರ ಮನೋಜ್ ಮುಂತಾಶೀರ್ ಮಾತನಾಡಿದ್ದು, ಹನುಮಾನ್ ದೇವರಲ್ಲ. ಕೇವಲ ಭಕ್ತ. ಅವನ ಆ ಭಕ್ತಿಗೆ ಶಕ್ತಿ ಇದ್ದ ಕಾರಣಕ್ಕೆ ನಾವೆಲ್ಲಾ ಅವನನ್ನು ಭಗವಾನ್ ರೀತಿ ಕಾಣುತ್ತಿವೆ. ಭಜರಂಗಬಲಿ ದೇವರೇ ಅಲ್ಲ ಎಂದು ಹಿಂದಿಯಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಗೀತ ರಚನೆಕಾರರ ಈ ಹೇಳಿಕೆಗೆ ಹನುಮಂತನ ಭಕ್ತರು ರೊಚ್ಚಿಗೆದ್ದಿದ್ದಾರೆ. ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ‌. ಆಂಜನೇಯನ ಭಕ್ತರು ಕಡಿಮೆ ಏನು ಇಲ್ಲ. ಭಜರಂಗ ಬಲಿ ಎಂದೇ ಆರಾಧಿಸುವವರ ಕೆಂಗಣ್ಣಿಗೆ ಆದಿಪುರುಷ್ ತಂಡ ಗುರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *