ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಈಗಾಗಲೇ ಕೊರೊನಾ ಆತಂಕ ಶುರುವಾಗಿದೆ. ಕೆಲವು ರಾಜ್ಯಗಳಲ್ಲಿ ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಿದ್ದಾರೆ ಎಂದಿದ್ದಾರೆ.
ಕೊರೊನಾ ಕೇಸ್ ಗಳು ಕಳೆದ 8-10 ದಿನಗಳಿಂದ ಹೆಚ್ಚಾಗಿದೆ. ಅದರಲ್ಲೂ ಕೇರಳ, ಮಹಾರಾಷ್ಟ್ರದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿವೆ. ಕೇಂದ್ರ ಸರ್ಕಾರದಿಂದ ಈಗಾಗಲೇ ಜಾಗೃತಿ ಸೂಚನೆ ಸಿಕ್ಕಿದೆ. ಅಷ್ಟೇ ಅಲ್ಲ ಕೋವಿಡ್ ತಜ್ಞರು ಕೂಡ ಎಚ್ಚರದಿಂದಿರಲು ಸೂಚಿಸಿದ್ದಾರೆ.
ಇನ್ನು ಕೋವಿಡ್ ಎರಡನೇ ಅಲೆ ಬಹಳ ಗಂಭೀರವಾಗಿತ್ತು. ಸಾಕಷ್ಟು ಜನರಿಗೆ ಸಮಸ್ಯೆಯಾಗಿದೆ. ಅದರ ಮುಂದುವರೆದ ತಳಿ ಒಮಿಕ್ರಾನ್. ಈಗ ಒಮಿಕ್ರಾನ್ ಯಾವ ರೀತಿಯಲ್ಲಿದೆ ಅನ್ನೋದನ್ನು ನೋಡಬೇಕು. ಅದನ್ನು ಪರಿಶೀಲಿಸಲಾಗುತ್ತೆ ಎಂದಿದ್ದಾರೆ.