ಮತ್ತೆ ಲಾಕ್ ಡೌನ್ : ಶಾಲಾ ಕಾಲೇಜು,ಸಿನಿಮಾ ಹಾಲ್‌ ಬಂದ್ !

ನವದೆಹಲಿ : ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಮೊದಲ ಹಂತವಾಗಿ yellow alert ಘೋಷಿಸಲಾಗಿದೆ.

ವಿಪತ್ತು ನಿರ್ವಹಣಾ ಪ್ರಾಧಿಕಾರವು ಘೋಷಿಸಿದ ಹೊಸ ಮಾರ್ಗಸೂಚಿಗಳನ್ನು ಮೀರಿ ಧನಾತ್ಮಕ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ (ಜೂನ್ 9 ರಿಂದ) ಕೇವಲ ಒಂದು ದಿನದಲ್ಲಿ 331 ಪ್ರಕರಣಗಳು ಏರಿಕೆಯಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸತತ ಎರಡು ದಿನಗಳವರೆಗೆ ಪಾಸಿಟಿವಿಟಿ ದರವು 0.5% ಕ್ಕಿಂತ ಹೆಚ್ಚಿದ್ದರೆ ಅಥವಾ ಸತತ ಏಳು ದಿನಗಳಲ್ಲಿ ಧನಾತ್ಮಕ ಪ್ರಕರಣಗಳ ಸಂಖ್ಯೆ 1,500 ಮೀರಿದರೆ yellow alert   ವಿಧಿಸಬಹುದು ಎಂದು ಅದು ಹೇಳಿದೆ.

ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ ,

  • ಎಲ್ಲಾ ಶಿಕ್ಷಣ ಸಂಸ್ಥೆಗಳು, ಸಿನಿಮಾ ಹಾಲ್‌ಗಳು ಮತ್ತು ಜಿಮ್‌ಗಳನ್ನು ಮುಚ್ಚಲಾಗುವುದು.
  • ನಗರದಲ್ಲಿ ರಾತ್ರಿ 11ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ.
  • 50 ರಷ್ಟು ಸಾಮರ್ಥ್ಯದಲ್ಲಿ ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.
  •  ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರಿಗೆ ಮಾತ್ರ ಅವಕಾಶ.
  • 50 ರಷ್ಟು ಸಾಮರ್ಥ್ಯದೊಂದಿಗೆ ಬಾರ್‌ಗಳು, ಸ್ಪಾಗಳು ಕಾರ್ಯನಿರ್ವಹಿಸಲಿವೆ.
  • 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ರೆಸ್ಟೋರೆಂಟ್‌ಗಳಿಗೆ ಅನುಮತಿ.
  • ಹೋಟೆಲ್‌ಗಳು ಕ್ವಾರಂಟೈನ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
  • ಮದುವೆ ಮತ್ತು ಅಂತ್ಯಕ್ರಿಯೆಗಳಲ್ಲಿ 20 ಜನರಿಗೆ ಮಾತ್ರ ಅವಕಾಶವಿದೆ.
  • ಅಗತ್ಯವಲ್ಲದ ಸೇವೆಗಳು ಅಥವಾ ಸರಕುಗಳನ್ನು ಹೊಂದಿರುವ ಅಂಗಡಿಗಳು/ಮಾಲ್‌ಗಳು ಬೆಸ-ಸಮ ನಿಯಮದ ಅಡಿಯಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತವೆ.
  • ದೆಹಲಿ ಮೆಟ್ರೋ 50% ಆಸನ ಸಾಮರ್ಥ್ಯದೊಂದಿಗೆ ಚಲಿಸುತ್ತದೆ, ಆದರೆ ನಿಂತಿರುವ ಪ್ರಯಾಣಿಕರಿಗೆ ಅವಕಾಶವಿಲ್ಲ.
  •  ಧಾರ್ಮಿಕ ಸ್ಥಳಗಳು ತೆರೆದಿರುತ್ತವೆ ಆದರೆ ಭಕ್ತರಿಗೆ ಪ್ರವೇಶವಿಲ್ಲ.
  • ಮುಂದಿನ ಮಾರ್ಗಸೂಚಿಗಳನ್ನು ಹೊರಡಿಸುವವರೆಗೆ ದೆಹಲಿ ಸರ್ಕಾರವು ಎಲ್ಲಾ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಭೆಗಳನ್ನು ನಿಷೇಧಿಸಿದೆ.
Share This Article
Leave a Comment

Leave a Reply

Your email address will not be published. Required fields are marked *