ಕವಾಡಿಗರಹಟ್ಟಿ ಪ್ರಕರಣವನ್ನು ಸ್ಥಳೀಯ ಶಾಸಕರು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ : ಗೃಹ ಸಚಿವ ಪರಮೇಶ್ವರ್ ಮತ್ತು ಸಚಿವ ಮಹೇದೇವಪ್ಪ ರಾಜೀನಾಮೆ ನೀಡಲಿ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

ಚಿತ್ರದುರ್ಗ(ಆ.17) : ನಗರದ ಹೂರವಲಯದ ಕಾವಾಡಿಗರ ಹಟ್ಟಿಯಲ್ಲಿ ನಡೆದಿರುವ ದುರಂತವನ್ನು ಇಲ್ಲಿನ ಸ್ಥಳೀಯ
ಶಾಸಕರು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದರಿಂದ ಈ ಭಾಗದ ಜನಕ್ಕೆ ನ್ಯಾಯ ದೊರಕುತ್ತಿಲ್ಲ. ಇದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಮ್ ಆದ್ಮಿ ಪಾರ್ಟಿಯ ಎಸ್.ಟಿ/ಎಸ್.ಸಿ. ಘಟಕದ ರಾಜ್ಯಾಧ್ಯಕ್ಷರಾದ ಪುರೂಷೋತ್ತಮ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕವಾಡಿಗರ ಹಟ್ಟಿಗೆ ಇಂದು ಭೇಟಿ ನೀಡಿದ ಅವರು ಅಲ್ಲಿ ಮೃತರಾದ ಮನೆಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿ ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ನೀರು ಬಿಡುವ ಮತ್ತು ಈ ಭಾಗದ ನಗರಸಭಾ ಸದಸ್ಯರು ತಪ್ಪಿತಸ್ಥರೆಂದು ಕಾಣುತ್ತಿದೆ. ಇಲ್ಲವಾದರೆ ಈ ಇಬ್ಬರು ಏಕೆ ಕಾಣೆಯಾಗುತ್ತಿದ್ದರು‌. ಪ್ರಕರಣ ನಡೆದಾಗಿನಿಂದ ಇಬ್ಬರು ಇಲ್ಲಿಗೆ ಬಂದಿಲ್ಲ. ಯಾರ ಕಷ್ಟವನ್ನು ಸಹಾ ಕೇಳಿಲ್ಲ, ಹಾಗೇಯೇ ಈ ಭಾಗದ ಶಾಸಕರಾದ ವಿರೇಂದ್ರ ಪಪ್ಪಿಯವರು ಈ ಭಾಗದ ಜನತೆಗೆ ಆಹಾರವನ್ನು ಕೂಡಿಸುವುದರ ಮೂಲಕ  ಸಂತೈಸಿದ್ದಾರೆ. ಈ ಪ್ರಕರಣದ ಬಗ್ಗೆ ಯಾವ ಮಾತನ್ನು ಆಡಿಲ್ಲ ಅಲ್ಲದೆ ಪ್ರಕರಣವನ್ನು ಸಹಾ ದಾಖಲಿಸಿಲ್ಲ ಅಲ್ಲದೇ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೂ ಸಹಾ ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಿಲ್ಲ ಇಲ್ಲಿನ ಜನತೆ ಇನ್ನು ಗತ ಕಾಲದಲ್ಲಿಯೇ ಇದ್ಧಾರೆ ಅದೇ ಮುರುಕಲು ಮನೆ ಇಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ಶೌಚಾಲಯಕ್ಕೆ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಇದೆ, ಸರ್ಕಾರ ಈ ಭಾಗದ ಜನತೆಗೆ ಸರಿಯಾದ ಸೌಲಭ್ಯ ನೀಡಿಲ್ಲ, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸಹಾ ಇವರಿಗೆ ಮನೆಯನ್ನು ನೀಡಿಲ್ಲ, ಈ ಭಾಗದ ಶಾಸಕರು ಇವರ ಮತವನ್ನು ಮಾತ್ರ ಪಡೆದಿದ್ದಾರೆ ಇವರಿಗೆ ಸಿಗಬೇಕಾದ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ಸೊತ್ತಿದ್ದಾರೆ ಎಂದು ದೂರಿದರು.

ಆಮ್ ಆದ್ಮಿ ಪಾರ್ಟಿಯ ಎಸ್.ಟಿ/ಎಸ್.ಸಿ. ಘಟಕದ ಉಪಾಧ್ಯಕ್ಷರಾದ ಶಿವಪ್ಪ ಮಾತನಾಡಿ, ಸರ್ಕಾರದಲ್ಲಿ ಇಬ್ಬರು ದಲಿತ ಮಂತ್ರಿಗಳಿದ್ದಾರೆ ಈ ಪ್ರಕರಣ ನಡೆದ ಇಷ್ಟು ದಿನವಾದರೂ ಸಹಾ ಇಲ್ಲಿಗೆ ಬಂದಿಲ್ಲ ಸರ್ಕಾರವೂ ಸಹಾ ಇಲ್ಲಿನ ಜನತೆಗೆ ಸೌಲಭ್ಯವನ್ನು ನೀಡುವಲ್ಲಿ ವಿಫಲವಾಗಿದೆ, ಈ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಸಚಿವರಾದ ಮಹೇದೇವಪ್ಪ ಮತ್ತು ಗೃಹ ಮಂತ್ರಿಗಳಾದ ಪರಮೇಶ್ವರ ಇಬ್ಬರು ಸಹಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತೆ ಆಗ್ರಹಿಸಿದರು.

ಚುನಾವಣೆ ಸಮಯದಲ್ಲಿ ಬರುವ ರಾಜಕಾರಣೀಗಳು ಈಗ ಸಾವಾದಾಗ ಬರುತ್ತಿಲ್ಲ, ಚುನಾಯಿತ ಪ್ರತಿನಿಧಿಗಳಿಗೆ ಮಾದಿಗ ಮತ ಮಾತ್ರ ಬೇಕು ಆವರ ಕಷ್ಟಗಳು ಬೇಕಿಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರು ಸಮಾನರು ಎನ್ನುತ್ತಾರೆ ಆದರೆ ಇಲ್ಲಿ ಸೌಲಭ್ಯ ನೀಡುವಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಬರುವ ಚುನಾವಣೆಯ ಸಮಯದಲ್ಲಿ ಮತವನ್ನು ಕೇಳಲು ಬರುವ ರಾಜಕಾರಣಿಗೆ ಸರಿಯಾದ ರೀತಿಯಲ್ಲಿ ತಕ್ಕ ಉತ್ತರವನ್ನು ನೀಡುವಂತೆ ಕಿವಿ ಮಾತು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಇಲ್ಲಿ ಸಾವನ್ನಪ್ಪಿದವರಿಗೆ ಸರ್ಕಾರ ಬರೀ ಹತ್ತು ಲಕ್ಷ ರೂ.ಗಳನ್ನು ನೀಡುವುದರ ಮೂಲಕ ಸುಮ್ಮನಾಗಿದೆ ಇದರ ಬದಲಿಗೆ ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ ಹಾಗೂ ಮನೆಗೆ ಒಬ್ಬರಂತೆ ಸರ್ಕಾರಿ ಉದ್ಯೋಗವನ್ನು ನೀಡುವುದರ ಮೂಲಕ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತ ಗಮನ ನೀಡಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಕಾರ್ಯದರ್ಶಿ ಗಂಗಪ್ಪ, ಚಿತ್ರದುರ್ಗ ಎಸ್.ಟಿ.ಘಟಕದ ಅಧ್ಯಕ್ಷ ಮಹಾಂತೇಶ್, ಮುಖಂಡರಾದ ರವಿ.ಗುರು.ಸುಭಾಷ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *