ಲಂಡನ್ : ಇತ್ತಿಚೆಗಷ್ಟೇ ಭಾರತ ಮೂಲದ ರಿಷಿ ಸುನಕ್ ಹಾಗೂ ಲಿಜ್ ಟ್ರಸ್ ನಡುವೆ ದೊಡ್ಡ ಸ್ಪರ್ದೆಯೇ ಏರ್ಪಟ್ಟಿತ್ತು. ಆದರೆ ಕಡೆಗೆ ಫಲಿತಾಂಶ ಬಂದದ್ದು ಲಿಜ್ ಪರವಾಗಿ. ಲಿಜ್ ಟ್ರಸ್ ಬ್ರಿಟನ್ ಪ್ರಧಾನಿಯಾಗಿ ಪಟ್ಟಕ್ಕೇರಿದ್ದರು. ಆದರೆ ಕೆಲವೇ ವಾರಗಳಲ್ಲಿ ಅವರು ತಮ್ಮ ಸ್ಥಾನವನ್ನು ತೊರೆಯುತ್ತಿದ್ದಾರೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ.
ಬ್ರಿಟನ್ ನಲ್ಲಿ ಸದ್ಯ ರಾಜಕೀಯ ಬಿಕಗಕಟ್ಟು ಎದುರಾಗಿದೆ. ಆರ್ಥಿಕ ಮತ್ತು ಅಂತರಾಷ್ಟ್ರೀಯ ಅಸ್ಥಿರತೆಯ ಸಮಯದಲ್ಲಿ ನಾನು ಅಧಿಕಾರಕ್ಕೆ ಬಂದಿದ್ದೆ. ಹೀಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಉತ್ತರಾಧಿಕಾರಿ ಆಯ್ಕೆಯಾಗುವ ತನಕ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಲಪಂಥಿಯ ಆರ್ಥಿಕತೆಯ ಕಾರ್ಯಸೂಚಿಯಿಂದ ಪ್ರಧಾನಿ ಟ್ರಸ್ ಹಿಂದೆ ಸರಿಯುತ್ತಿದ್ದಂತೆ, ಹಲವು ರೀತಿಯ ಚರ್ಚೆಗಳು ಹುಟ್ಟಿಕೊಂಡಿದ್ದವು. ಟ್ರಸ್ ಕೂಡ ಅಧಿಕಾರದಲ್ಲಿ ಹೆಚ್ಚು ಸಮಯ ಉಳಿಯುವುದಿಲ್ಲ ಎಂದೇ ಹೇಳಲಾಗಿತ್ತು. ಇದೀಗ ಅದು ನಿಜವಾಗಿದೆ. ಇನ್ನು ಟ್ರಸ್ ಅಧಿಕಾರವಹಿಸಿಕೊಂಡಾದ ಮೇಲೆ ಒಬ್ಬೊಬ್ಬರೇ ಅಧಿಕಾರದಿಂದ ಹೊರ ನಡೆದಿದ್ದರು. ಹಣಕಾಸು ಸಚಿವ, ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈಗ ಲಿಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಭಾರತ ಮೂಲದ ರಿಷಿ ಸುನಕ್ ಅವರಿಗೆ ಮತ್ತೆ ಪ್ರಧಾನಿ ಪಟ್ಟ ಒಲಿದು ಬರಬಹುದು ಎನ್ನಲಾಗಿದೆ. ಲಿಜ್ ಮತ್ತು ಸುನಕ್ ನಡುವೆಯೇ ಪೈಪೋಟಿ ಜೋರಾಗಿತ್ತು.