ಹವಾಯಿ ದ್ವೀಪದಲ್ಲಿ ಜೀವಂತ ಜ್ವಾಲಾಮುಖಿಗಳು : ಜೆ. ಪರಶುರಾಮ ಅವರ ವಿಶೇಷ ಲೇಖನ

 

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 94483 38821

 

ಸುದ್ದಿಒನ್
ಹವಾಯಿ ದ್ವೀಪ ಒಂದು ಅಗ್ನಿಪರ್ವತದಿಂದ ರೂಪಗೊಂಡ ದ್ವೀಪವಾಗಿದೆ. ಇದು ಅಮೇರಿಕಾದ ಹವಾಯಿ ರಾಜ್ಯದ ಭಾಗವಾಗಿದ್ದು, ತನ್ನ ವೈವಿದ್ಯಮಯ ಭೂಪ್ರಕೃತಿ ಹವಾಯಿ ವಲಯಗಳು ಸಕ್ರಿಯ ಅಗ್ನಿ ಪರ್ವಗಳು. ಸುಂದರ ಕಡಲ ತೀರಗಳು ಮತ್ತು ಸಂರಕ್ಷಿತ ಪ್ರದೇಶಗಳಿಗೆ ಹೆಸರುವಾಸಿಯಾಗಿದೆ. ಮೌನಾಕಿಮಾ ಮತ್ತು ಮೌನಲೋನಾ ಪರ್ವತಗಳಂತಹ ಪ್ರಮುಖ ಭೂಗೋಳಿಕ ವೈಶಿಷ್ಯಗಳನ್ನು ಇದು ಹೊಂದಿದೆ. ಈ ದ್ವೀಪವು ವಿಶ್ವದ ಸುಮಾರು ಎಲ್ಲಾ ಹವಾಮಾನ ವಲಯಗಳನ್ನು ಹೊಂದಿದೆ. ಇದು ವಿಶ್ವದ ಅತಿ ಎತ್ತರದ ಸಮುದ್ರ ಪರ್ವತವಾದ ಮೌನಾಕಿಯಾ ಮತ್ತು ವಿಶ್ವದ ಅತಿದೊಡ್ಡ ಪರ್ವತವಾಗಿ ಮೌನಾಲೋನಾ ಅನ್ನು ಒಳಗೊಂಡಿದೆ. ಈ ದ್ವೀಪವು ತನ್ನ ಸಕ್ರಿಯ ಅಗ್ನಿ ಪರ್ವತಗಳು, ವಿಮಾನಗಳ ಸಂಚಾರ, ಸರ್ಪಿಗ್ ಬೀಚುಗಳು ಮತ್ತು ವಿಜ್ಞಾನ ಸಂಶೋಧನಗಳಿಗೆ, ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪುರಾತನ ಹವಾಯಿ ನಾಗರೀಕತೆಯಿಂದ ಹಿಡಿದು ಯೂರೋಪಿಯನ್ನರ ಆಗಮನದವರೆಗೂ ಇದರ ಇತಿಹಾಸವಿದೆ. 1778 ರಲ್ಲಿ ಜೀಮ್‍ಕುಕ್ ಈ ದ್ವೀಪವನ್ನು ತಲುಪಿದ ನಂತರ ಯೂರೋಪಿಯನ್ನರ ಪ್ರಾಬಲ್ಯ ಹೆಚ್ಚಾಯಿತು. ನಂತರ ಇದು ಪ್ರಜಾಪ್ರಭುತ್ವ ಮತ್ತು ಅಂತಿಮವಾಗಿ ಅಮೇರಿಕಾದೊಂದಿಗೆ ವಿಲೀನಗೊಂಡಿತು.

ಹವಾಯಿಯ ಭೂಗರ್ಭ ಗಾತ್ರವು ವಿಶಿಷ್ಟವಾಗಿದ್ದು, ಇದು ಮುಖ್ಯವಾಗಿ ಹಾಟ್‍ಸ್ಪಾಟ್ ಎಂಬ ಭೂಮಿಯ ಆಳದಲ್ಲಿರುವ ಶಾಖದ ಮೂಲದಿಂದ ರೂಪುಗೊಂಡ ಜ್ವಾಲಾಮುಖಿ ದ್ವೀಪಗಳು ಸರಪಳಿಯಾಗಿದೆ. ಸಾಮಾನ್ಯವಾಗಿ ಜ್ವಾಲಾಮುಖಿಗಳು ಟೆಕ್ಟೋನಿಕ್ ಪ್ಲೇಟುಗಳ ಅಂಚುಗಳಲ್ಲಿ ಕಂಡುಬರುತ್ತದೆ. ಆದರೆ ಹವಾಯಿ ದ್ವೀಪಗಳು ಫೆಸಿಫಿಕ್ ಪ್ಲೇಟಿನ ಮಧ್ಯಭಾಗದಲ್ಲಿರುವ, ಸ್ಥಿರವಾದ ಹಾಟ್‍ಸ್ಪಾಟ್‍ನ ಮೇಲೆ ರೂಪುಗೊಂಡಿವೆ. ಈ ಹಾಟ್‍ಸ್ಟಾಟ್‍ನ ಭೂಮಿಯ ಆಳವಾದ ಪದರದಿಂದ ಬರುವ ಬಿಸಿಯಾದ ಶಿಲಾಪಾಕವನ್ನು ಮೇಲಕ್ಕೆ ತಳ್ಳುತ್ತದೆ. ಹಾಟ್‍ಸ್ಪಾಟ್ ಒಂದೇ ಸ್ಥಳದಲ್ಲಿ ಸ್ಥಿರವಾಗಿರುತ್ತದೆ. ಆದರೆ ಅದರ ಮೇಲಿರುವ ಫೆಸಿಫಿಕ್ ಟೆಕ್ಟೋನಿಕ್ ಪ್ಲೇಟ್ ವಾಯುವ್ಯದಿಕ್ಕಿಗೆ ನಿಧಾನವಾಗಿ ಚಲುಸುತ್ತದೆ. ಪ್ಲೇಟ್ ಚಲಿಸದಂತೆ ಹಾಟ್‍ಸ್ಪಾಟ್ ಹೊಸ ಜ್ವಾಲಾಮುಖಿಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಹೀಗಾಗಿ ದ್ವೀಪಗಳ ಸರಪಳಿ ರೂಪುಗೊಳ್ಳುತ್ತದೆ.

ಹವಾಯಿಯಲ್ಲಿರುವ ಮುಖ್ಯ ಜ್ವಾಲಾಮುಖಿಗಳು “ಶೀಲ್ಡ್” ಜ್ವಾಲಾಮುಖಿಗಳು ಒಸಾಟ್ಟ್‍ಕ್ ಲಾವಾ ಹರಿಯುವಿಕೆಯಿಂದಾಗಿ ಇದು ಕಡಿದಾದ ಇಳಿಜಾರುಗಳಿಲ್ಲದೇ, ಅಗವಾಗಿ ಗುರಾಣಿಯಂತಹ ಆಕಾರವನ್ನು ಹೊಂದಿದೆ. ಹವಾಯಿ ದ್ವೀಪಗಳ ವಯಸ್ಸು ದ್ವೀಪದಿಂದ ದ್ವೀಪಕ್ಕೆ ಬದಲಾಗುತ್ತದೆ.

ದ್ವೀಪ ಪುಂಜನ ಉತ್ತರ ಪಶ್ಚಿಮಕ್ಕೆ ಹೋದಂತೆ ದ್ವೀಪಗಳು ಕ್ರಮೇಣ ಹಳೆಯದಾಗುತ್ತಾ ಹೋಗುತ್ತವೆ. ಕೆಲವು 65 ದಶಲಕ್ಷ ವರ್ಷಗಳಿಗಿಂತ ಹಳೆಯದಾಗಿದೆ ಎಂದು ಭೂವೈಜ್ಞಾನಿಕವಾಗಿ ದೃಢಪಡಿಸಿದೆ. ಪ್ರಪಂಚದಲ್ಲಿ ಜೀವಂತ ಜ್ವಾಲಾಮುಖಿಗಳನ್ನು ಹವಾಯಿ ದ್ವೀಪಗಳಲ್ಲಿ ಈಗಲೂ ನೋಡಬಹುದು.

Share This Article